ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಬಿಬಿಎಂಪಿಗೆ ಪ್ರಶಸ್ತಿ

ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದ ಪ್ರದಾನ
Last Updated 4 ನವೆಂಬರ್ 2018, 20:42 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು ಮಹಾನರ ಸಾರಿಗೆ ಸಂಸ್ಥೆ ಹಾಗೂ ಬಿಬಿಎಂಪಿಗೆ ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದ ಪ್ರಶಸ್ತಿ ಲಭಿಸಿದೆ. ಮಹಾರಾಷ್ಟ್ರದ ನಾಗಪುರದಲ್ಲಿ ನಡೆಯುತ್ತಿರುವ 11ನೇ ನಗರ ಸಂಚಾರ ಸಮಾವೇಶ ಮತ್ತು ಪ್ರದರ್ಶನ ಮೇಳದಲ್ಲಿ ಭಾನುವಾರ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಕೆಎಸ್‌ಆರ್‌ಟಿಸಿಗೆ ಉತ್ತಮ ನಗರ ಸಾರಿಗೆ ಸೇವಾ ಯೋಜನೆ ವಿಭಾಗದಲ್ಲಿ ಶ್ರೇಷ್ಠತಾ ಪ್ರಶಸ್ತಿ (ಅವಾರ್ಡ್‌ ಆಫ್‌ ಎಕ್ಸಲೆನ್ಸ್‌) ಲಭಿಸಿದೆ. ಸಣ್ಣ ಮತ್ತು ಮಧ್ಯಮ ನಗರಗಳಲ್ಲಿ ಸಿಟಿಬಸ್‌ ಸೇವಾ ಯೋಜನೆಗಾಗಿ ಈ ಪ್ರಶಸ್ತಿ ಸಿಕ್ಕಿದೆ. ಸರ್ಕಾರಿ ಸಾರಿಗೆ ಸಂಸ್ಥೆಗಳು ನಗರ ಪ್ರದೇಶದಲ್ಲಿ ವ್ಯವಸ್ಥಿತವಾಗಿ ಸಾರ್ವಜನಿಕ ಸಾರಿಗೆ ಪರಿಚಯಿಸಿ ಅಭಿವೃದ್ಧಿಪಡಿಸಬಹುದು ಎಂಬುದನ್ನು ಸಂಸ್ಥೆ ತೋರಿಸಿಕೊಟ್ಟಿದೆ. ಮಾತ್ರವಲ್ಲ, ಸಿಟಿಬಸ್‌ಗಳಲ್ಲಿ ಪ್ರಯಾಣದ ಅವಧಿ ಮತ್ತು ದರವನ್ನು ಕಡಿತಗೊಳಿಸುವ ಬಗ್ಗೆಯೂ ಯೋಜನೆಯ ಪ್ರಾತ್ಯಕ್ಷಿಕೆ ವಿವರಿಸಿದೆ. ಪ್ರಯಾಣಿಕರ ಸುರಕ್ಷತಾ ಸೌಲಭ್ಯಗಳನ್ನು ಉನ್ನತಮಟ್ಟಕ್ಕೇರಿಸಿದೆ ಎಂದು ಪ್ರಶಸ್ತಿಯ ಪ್ರಮಾಣಪತ್ರದಲ್ಲಿ ವಿವರಿಸಲಾಗಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ‘ಬಸ್‌‍ಪ್ರಯಾಣಿಕರ ಅನುಭವವನ್ನು ಸುಧಾರಿಸುವತ್ತ ಬಿಎಂಟಿಸಿ’ ಯೋಜನೆಗೆ ಶ್ರೇಷ್ಠತಾ (ಎಕ್ಸಲೆನ್ಸ್‌ ಇನ್‌ ಸಿಟಿಬಸ್‌ ಸರ್ವೀಸ್‌) ಪ್ರಶಸ್ತಿ ಲಭಿಸಿದೆ. ನಾಗಪುರದಲ್ಲಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಪೊನ್ನುರಾಜ್‌ ಪ್ರಶಸ್ತಿ ಸ್ವೀಕರಿಸಿದರು.

**

ಮಹಾನಗರ ಪಾಲಿಕೆಗೂ ಗೌರವ

ಇದೇ ಸಮಾರಂಭದಲ್ಲಿ ಮೋಟಾರೇತರ ಸಾರಿಗೆ ಯೋಜನೆ ಸಂಬಂಧಿಸಿದಂತೆ ಬಿಬಿಎಂಪಿಗೆ ‘ಶ್ಲಾಘನೀಯ ಉಪಕ್ರಮ’ ಪ್ರಶಸ್ತಿ ನೀಡಲಾಯಿತು. ಪಾಲಿಕೆ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಪ್ರಶಸ್ತಿ ಸ್ವೀಕರಿಸಿದರು.

ಟೆಂಡರ್ ಶ್ಯೂರ್ ಅಡಿ ರಸ್ತೆ ಅಭಿವೃದ್ಧಿ, ಪಾದಚಾರಿ ಮಾರ್ಗಗಳ ಸುಧಾರಣೆ, ನಗರ ಸಾರಿಗೆ ವ್ಯವಸ್ಥೆ ಸಂಪರ್ಕವಾಗುವಂತೆ ಪಾರ್ಕಿಂಗ್‌ ಸ್ಥಳ ಒದಗಿಸಿರುವುದು, ಸಾರಿಗೆ ವ್ಯವಸ್ಥೆಗಳನ್ನು ಏಕೀಕರಣಗೊಳಿಸಿರುವ ಕ್ರಮಗಳ ಯೋಜನೆಗೆ ಈ ಪ್ರಶಸ್ತಿ ಲಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT