ಸೋಮವಾರ, ಡಿಸೆಂಬರ್ 9, 2019
17 °C

ಅಧಿಕ ದರ ವಸೂಲಿ; ಏಜೆನ್ಸಿ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಿಗದಿಗಿಂತ ಹೆಚ್ಚು ದರ ಪಡೆಯುತ್ತಿದ್ದ ತಮಿಳುನಾಡಿನ ತಿರುಕೋಯಿಲೂರಿನ ಕೆಎಸ್‌ಆರ್‌ಟಿಸಿ ಟಿಕೆಟ್‌ ಬುಕ್ಕಿಂಗ್‌ನ ಖಾಸಗಿ ಏಜೆನ್ಸಿಯ ಕಾರ್ಯ ಸ್ಥಗಿತಗೊಳಿಸಲಾಗಿದೆ. 

ಕೆಎಸ್‌ಆರ್‌ಟಿಸಿ ಬಸ್‌ಗಳ ಟಿಕೆಟ್‌ನ ನಿಗದಿತ ದರದ ಬದಲು ₹ 50ರಿಂದ ₹70ರಷ್ಟು ಅಧಿಕ ವಸೂಲು ಮಾಡುತ್ತಿದ್ದ ಪ್ರಕರಣವನ್ನು ನಿಗಮದ ತನಿಖಾ ತಂಡ ಪತ್ತೆಹಚ್ಚಿದೆ.

₹ 215 ದರದ ಎರಡು ಟಿಕೆಟ್‌ಗಳಿಗೆ ₹ 430ರ ಬದಲು₹500 ಪಡೆದಿದ್ದರು. ಇನ್ನೊಂದು ಪ್ರಕರಣದಲ್ಲಿ ₹ 480 ಪಡೆದಿದ್ದರು. ಪ್ರಯಾಣಿಕರ ಬಳಿ ವಿಚಾರಿಸಿದಾಗಲೂ ಅವರು ಈ ವಂಚನೆಯ ಬಗ್ಗೆ ಮಾಹಿತಿ ನೀಡಿದರು.

ಪ್ರಯಾಣಿಕರ ಹೇಳಿಕೆ ಮತ್ತು ಸ್ಥಳ ಪರಿಶೀಲನೆ ಆಧಾರದಲ್ಲಿ ಏಜೆನ್ಸಿಯನ್ನು ಸ್ಥಗಿತಗೊಳಿಸಲಾಗಿದೆ. ಅವರಿಗೆ ನೋಟಿಸ್‌ ನೀಡಲಾಗಿದೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು