ಸೋಮವಾರ, ಡಿಸೆಂಬರ್ 9, 2019
17 °C

11 ವರ್ಷಗಳ ಬಳಿಕ ತಮಿಳುನಾಡು–ಕರ್ನಾಟಕ ಸಾರಿಗೆ ಒಪ್ಪಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರ್ನಾಟಕ ಮತ್ತು ತಮಿಳುನಾಡು ಮಧ್ಯೆ ಹೆಚ್ಚುವರಿ ಬಸ್‌ಗಳ ಸಂಚಾರ ಏರ್ಪಡಿಸುವ ಸಂಬಂಧ ಉಭಯ ರಾಜ್ಯಗಳ ಸಾರಿಗೆ ನಿಗಮಗಳ ನಡುವೆ 11 ವರ್ಷಗಳ ಬಳಿಕ ಮಹತ್ವದ ಒಪ್ಪಂದ ಶುಕ್ರವಾರ ನಡೆದಿದೆ.

ಹಾಲಿ ಇರುವ ಮಾರ್ಗಗಳಲ್ಲಿ ಹೆಚ್ಚುವರಿ ಬಸ್‌ಗಳ ಕಾರ್ಯಾಚರಣೆ ಮಾಡಲು ಹಾಗೂ ನೂತನ ಮಾರ್ಗಗಳಲ್ಲಿ ಹೊಸದಾಗಿ ಸಂಚಾರ ಆರಂಭಿಸಲು ಪ್ರಯಾಣಿಕರಿಂದ ಬೇಡಿಕೆಯೂ ಬಂದಿದೆ. ಈ ಆಧಾರದಲ್ಲಿ ಬಸ್‌ಗಳನ್ನು ಓಡಿಸಲು ಉಭಯ ರಾಜ್ಯಗಳ ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಒಪ್ಪಂದಕ್ಕೆ ಸಹಿ ಹಾಕಿದರು. 

‘ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಈ ಹಿಂದಿನ ಅಂತರರಾಜ್ಯ ಸಾರಿಗೆ ಒಪ್ಪಂದವು 2007-08ನೇ ಸಾಲಿನಲ್ಲಿ ನಡೆದಿತ್ತು. ನಂತರ ಯಾವುದೇ ಮಾತುಕತೆ ನಡೆದಿರಲಿಲ್ಲ. ಈ ಅವಧಿಯಲ್ಲಿ ಎರಡೂ ರಾಜ್ಯಗಳ ನಡುವೆ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಇಂದು ನಡೆದ ಮಾತುಕತೆ ಉಭಯ ರಾಜ್ಯಗಳ ನಡುವಿನ ಸಾರಿಗೆ ವ್ಯವಸ್ಥೆಯಲ್ಲಿ ಉತ್ತಮ ಸುಧಾರಣೆ ತರಲಿದೆ’ ಎಂದು ಉಭಯ ನಿಗಮಗಳ ಅಧಿಕಾರಿಗಳು ಹೇಳಿದರು.    

ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ, ತಮಿಳುನಾಡು ಸ್ಟೇಟ್‌ ಎಕ್ಸ್‌ಪ್ರೆಸ್‌ ಟ್ರಾನ್ಸ್‌ಪೋರ್ಟ್‌ ಕಾರ್ಪೊರೇಷನ್‌ನ ವ್ಯವಸ್ಥಾಪಕ ನಿರ್ದೇಶಕ ಭಾಸ್ಕರನ್‌, ಸೇಲಂನ ವ್ಯವಸ್ಥಾಪಕ ನಿರ್ದೇಶಕ ಅರವಿಂದ್‌, ಟಿಎನ್‍ಎಸ್‍ಟಿಸಿ ವಿಳ್ಳುಪುರಂ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಗಣೇಶನ್‌ ಸಭೆಯಲ್ಲಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು