ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಟಿಎಂ ಬೈಕ್ ರೇಸ್ ರೋಮಾಂಚನ

Last Updated 26 ಮೇ 2019, 15:07 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ಡೆನಿಸನ್ಸ್ ಹೋಟೆಲ್‌ ಆವರಣದಲ್ಲಿ ಭಾನುವಾರ ನಡೆದ ಕೆಟಿಎಂ ಬೈಕ್ ರೇಸ್ (ಆರೆಂಜ್ ಡೇ) ನೋಡುಗರ ರೋಮಾಂಚನ ಉಂಟು ಮಾಡಿತು. ಸ್ಪರ್ಧಿಗಳ ವೇಗ ಹಾಗೂ ಕೌಶಲಕ್ಕೆ ರೇಸ್ ಪ್ರಿಯರು ಮನಸೋತರು.

ರೇಸ್‌ಗೂ ಮೊದಲು ನಡೆದ ಬೈಕ್ ಸ್ಟಂಟ್‌ಗಳು ಗಮನ ಸೆಳೆದವು. ಒಂದೇ ಚಕ್ರದ ಮೇಲೆ ಚಾಲನೆ, ವೇಗದ ಚಾಲನೆಯ ವೇಳೆಯೇ ಪ್ರದರ್ಶಿಸಿದ ಸಾಹಸಗಳು ಉಸಿರು ಬಿಗಿ ಹಿಡಿಯುವಂತೆ ಮಾಡಿದವು. ಅಪಾಯಕಾರಿ ಎನಿಸುವ ಸ್ಟಂಟ್‌ಗಳು ನೀರು ಕುಡಿದಂತೆ ಮಾಡಿ ಚಪ್ಪಾಳೆ– ಶಿಳ್ಳೆ ಗಿಟ್ಟಿಸಿದರು.

ಕೆಳಗೆ ಬಿದ್ದರೂ ಮತ್ತೆ ಎದ್ದು ಕ್ರೀಡಾ ಸ್ಫೂರ್ತಿಯಿಂದ ಮುನ್ನುಗ್ಗಿದ್ದ ಸ್ಪರ್ಧಿಗಳು ಪ್ರಶಂಸೆಗೆ ಪಾತ್ರರಾದರು. ಗೆದ್ದವರು ಋಷಿಯಿಂದ ಬೀಗಿದರು.

ಹುಬ್ಬಳ್ಳಿ ಹಾಗೂ ಸುತ್ತಮುತ್ತಲಿನ ಊರಿನ ನೂರಾರು ಮಂದಿಗೆ ರೇಸ್‌– ಸ್ಟಂಟ್ ವೀಕ್ಷಿಸಲು ಆಗಮಿಸಿದ್ದರು. ವಿವಿಧ ವಿಭಾಗಗಳಲ್ಲಿ ನಡೆದ ರೇಸ್‌ಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರಿಗೆ ಪ್ರಮಾಣ ಪತ್ರಗಳನ್ನು ನೀಡಲಾಯಿತು. ಮುಂದಿನ ಹಂತದ ರೇಸ್‌ಗೆ ಅವರು ಆಯ್ಕೆಯಾದರು.

ಅದ್ಭುತವಾಗಿದ್ದ ಬೈಕ್ ರೇಸ್ ಹಾಗೂ ಸ್ಟಂಟ್‌ ವೀಕ್ಷಿಸುವ ಸುವರ್ಣ ಅವಕಾಶ ಸ್ಥಳೀಯರದ್ದಾಗಿತ್ತು. ಯುವತಿಯರು ಸಹ ಅಧಿಕ ಸಂಖ್ಯೆಯಲ್ಲಿ ಆಗಮಿಸಿದ್ದು ವಿಶೇಷವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT