16ರಂದು ಕೊರವಂಜಿ ಉತ್ಸವ

7

16ರಂದು ಕೊರವಂಜಿ ಉತ್ಸವ

Published:
Updated:

ಬೆಂಗಳೂರು: ಕರ್ನಾಟಕ ರಾಜ್ಯ ಕುಳುವ ಮಹಾಸಭಾ ಇದೇ 16ರಂದು ಶಿವಮೊಗ್ಗ ನಗರದ ಅಂಬೇಡ್ಕರ್‌ ಭವನ
ದಲ್ಲಿ ‘ಕೊರವಂಜಿ ಉತ್ಸವ’ ಕಾರ್ಯಕ್ರಮ ಆಯೋಜಿಸಿದೆ.

ಕೊರಚ, ಕೊರಮ ಮತ್ತು ಕೊರವ ಜನಾಂಗದ ಸಾಂಸ್ಕೃತಿಕ ಮಹತ್ವವನ್ನು ಸಾರಲು ರಥ ಯಾತ್ರೆಯನ್ನು ಆರಂಭಿಸಲಾಗಿದೆ. ಅದು ರಾಜ್ಯದಾದ್ಯಂತ ಸಂಚರಿಸಿ ಉತ್ಸವದ ದಿನ ಶಿವಮೊಗ್ಗಕ್ಕೆ ತಲುಪಲಿದೆ ಎಂದು ಸಂಘಟನೆಯ ಅಧ್ಯಕ್ಷ ಕೆ.ಎನ್‌.ಪ್ರಭು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಇವು ತೀರ ಹಿಂದುಳಿದ ಅಲೆಮಾರಿ ಸಮುದಾಯಗಳಾಗಿವೆ. ಮಹಿಳೆಯರು ಕೊರವಂಜಿಗಳಾಗಿ ಕಣಿ ಹೇಳುತ್ತಾರೆ. ಕೊರವಂಜಿ ಕಲೆಯನ್ನು ಉಳಿಸುವ ದೃಷ್ಟಿಯಿಂದ ಉತ್ಸವ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

ಸಮುದಾಯದ ನಾಗಭೂಷಣ ಸ್ವಾಮೀಜಿ, ‘ಕೊರವಂಜಿ ಕಲೆಯನ್ನು ಉಳಿಸಿ, ಬೆಳಸಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸಬೇಕು. ಕೊರವಂಜಿಗಳಿಗೆ ಸರ್ಕಾರದಿಂದ ನೆರವು ಒದಗಿಸಬೇಕು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !