ದರ್ಶನ್ ಅಭಿಮಾನಿಗಳಿಗೆ ಲಾಠಿ ಏಟು

7
ರಾಮಲೀಲಾ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ l ಸೇನಾನಿಗಳ ಸ್ಮರಣೆ

ದರ್ಶನ್ ಅಭಿಮಾನಿಗಳಿಗೆ ಲಾಠಿ ಏಟು

Published:
Updated:
Deccan Herald

ರಾಮನಗರ: ಬುಧವಾರ ಇಲ್ಲಿನ ಎಂ.ಎಸ್. ಗೋಲ್ಡ್‌ ಅಂಡ್‌ ಡೈಮಂಡ್ಸ್‌ ಆಭರಣ ಮಳಿಗೆ ಉದ್ಘಾಟನೆಗೆ ಬಂದ ಚಿತ್ರನಟ ದರ್ಶನ್‌ರನ್ನು ಕಾಣಲು ಅಭಿಮಾನಿಗಳು ಮುಗಿಬಿದ್ದಿದ್ದು, ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಿದರು.

ಬೆಂಗಳೂರು -ಮೈಸೂರು ಹೆದ್ದಾರಿ ಬದಿಯಲ್ಲಿ ಬೆಳಿಗ್ಗೆ 11ಕ್ಕೆ ಕಾರ್ಯಕ್ರಮ ನಿಗದಿಯಾಗಿತ್ತು. ಬೆಳಿಗ್ಗೆಯಿಂದಲೇ ಸಾವಿರಾರು ಮಂದಿ ನೆರೆದಿದ್ದರು. ಯುವತಿಯರೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಹೊತ್ತು ಕಳೆದಂತೆಲ್ಲ ಜನರ ಸಂಖ್ಯೆಯೂ ಹೆಚ್ಚುತ್ತಾ ಹೋಯಿತು. ಸುತ್ತಲಿನ ಕಟ್ಟಡಗಳ ಮೇಲೆ ನಿಂತು ಜನರು ಕಾಯತೊಡಗಿದರು.

ಹೆದ್ದಾರಿಯಲ್ಲಿ ಜನರು ಕಿಕ್ಕಿರಿದು ನೆರೆದ ಕಾರಣ ವಾಹನಗಳ ಒಡಾಟಕ್ಕೆ ಅಡಚಣೆಯಾಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ತರುವ ಸಲುವಾಗಿ ಪೊಲೀಸರು ಹಲವು ಬಾರಿ ಲಘು ಲಾಠಿ ಪ್ರಹಾರ ನಡೆಸಿದರು.

ದರ್ಶನ್‌ ಬರುತ್ತಲೇ ಅಭಿಮಾನಿಗಳು ಹೆದ್ದಾರಿಗೆ ಇಳಿದರು. ಇದರಿಂದಾಗಿ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಯಿತು. ವಾಹನಗಳು ಕಿಲೋಮೀಟರ್‌ ಉದ್ದಕ್ಕೆ ಸಾಲುಗಟ್ಟಿ ನಿಂತವು. ನೂಕು ನುಗ್ಗಲು, ತಳ್ಳಾಟ ಹೆಚ್ಚಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಪೊಲೀಸರು ಮತ್ತೆ ಲಾಠಿ ಬೀಸಿದರು.

ಮಳಿಗೆ ಉದ್ಘಾಟಿಸಿದ ದರ್ಶನ್ ವೇದಿಕೆ ಹತ್ತಿ ಮಾತನಾಡಬೇಕಿತ್ತು. ಆದರೆ, ಹೆದ್ದಾರಿಯಲ್ಲಿ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದ್ದ ಕಾರಣ ವಾಹನ ಸಂಚಾರಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ವೇದಿಕೆ ಹತ್ತಲು ನಿರಾಕರಿಸಿದರು.

ಬರಹ ಇಷ್ಟವಾಯಿತೆ?

 • 14

  Happy
 • 2

  Amused
 • 0

  Sad
 • 2

  Frustrated
 • 5

  Angry

Comments:

0 comments

Write the first review for this !