ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥಹಳ್ಳಿ ಪ್ರಥಮ, ಶಿಕಾರಿಪುರ ಕೊನೆಯ ಸ್ಥಾನ

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಜಿಲ್ಲೆಯ 17,496 ವಿದ್ಯಾರ್ಥಿಗಳು ತೇರ್ಗಡೆ
Last Updated 9 ಮೇ 2018, 11:14 IST
ಅಕ್ಷರ ಗಾತ್ರ

ಶಿವಮೊಗ್ಗ: ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ತೀರ್ಥಹಳ್ಳಿ ತಾಲ್ಲೂಕು ಶೇ 86.4 ಫಲಿತಾಂಶ ಪಡೆದು ಜಿಲ್ಲೆಗೆ ಮೊದಲ ಸ್ಥಾನದಲ್ಲಿದ್ದರೆ, ಶಿಕಾರಿಪುರ ತಾಲ್ಲೂಕು ಶೇ 74.68 ಫಲಿತಾಂಶ ಪಡೆದು ಕೊನೆಯ ಸ್ಥಾನದಲ್ಲಿದೆ.

ಈ ಬಾರಿ ಜಿಲ್ಲೆಯ ಏಳೂ ತಾಲ್ಲೂಕುಗಳ 22,063 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅದರಲ್ಲಿ 17,496 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ‘ಎ+’ ಶ್ರೇಣಿಯಲ್ಲಿ (90–100) 1,137 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ‘ಎ’ ಶ್ರೇಣಿಯಲ್ಲಿ (80–89) 3,018 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ‘ಬಿ+’ ಶ್ರೇಣಿಯಲ್ಲಿ (70–79) 4,345 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ‘ಬಿ’ ಶ್ರೇಣಿಯಲ್ಲಿ (60–69) 4,776 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ‘ಸಿ+’ ಶ್ರೇಣಿಯಲ್ಲಿ (50–59) 3,479 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ‘ಸಿ‘ ಶ್ರೇಣಿಯಲ್ಲಿ (35–50) 741 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರೆ. 4,567 ವಿದ್ಯಾರ್ಥಿಗಳು ಅನುತೀರ್ಣರಾಗಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 454 ಶಾಲೆಗಳಿದ್ದು, 17 ಸರ್ಕಾರಿ ಶಾಲೆಗಳು, 3 ಅನುದಾನಿತ ಶಾಲೆಗಳು, 26 ಖಾಸಗಿ ಶಾಲೆಗಳು ಶೇ 100 ಫಲಿತಾಂಶ ಪಡೆದಿವೆ. 3 ಸರ್ಕಾರಿ ಶಾಲೆಗಳು, 7 ಅನುದಾನಿತ ಶಾಲೆಗಳು, 6 ಖಾಸಗಿ ಶಾಲೆಗಳು ಶೇ 1ರಿಂದ 40 ಫಲಿತಾಂಶ ಪಡೆದಿವೆ.

ತಾಲ್ಲೂಕುವಾರು ಫಲಿತಾಂಶ:

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಒಟ್ಟು 1,610 ಪರೀಕ್ಷೆ ಬರೆದಿದ್ದು, 1,391 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ, ಶೇ 86.4 ಫಲಿತಾಂಶ ಬಂದಿದೆ. ಹೊಸನಗರ ತಾಲ್ಲೂಕಿನಲ್ಲಿ ಒಟ್ಟು 1, 599 ಪರೀಕ್ಷೆ ಬರೆದಿದ್ದು, 1, 332 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಶೇ 83.3 ಫಲಿತಾಂಶ ಬಂದಿದೆ. ಸಾಗರ ತಾಲ್ಲೂಕಿನಲ್ಲಿ ಒಟ್ಟು 2, 757 ಪರೀಕ್ಷೆ ಬರೆದಿದ್ದು, 2,272 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಶೇ 82.41 ಫಲಿತಾಂಶ ಬಂದಿದೆ.

ಸೊರಬ ತಾಲ್ಲೂಕಿನಲ್ಲಿ ಒಟ್ಟು 2, 190 ಪರೀಕ್ಷೆ ಬರೆದಿದ್ದು, 1,739 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಶೇ 79.41 ಫಲಿತಾಂಶ ಬಂದಿದೆ. ಶಿವಮೊಗ್ಗ ತಾಲ್ಲೂಕಿನಲ್ಲಿ ಒಟ್ಟು  6,264 ಪರೀಕ್ಷೆ ಬರೆದಿದ್ದು, 4,816 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಶೇ 76.88 ಫಲಿತಾಂಶ ಬಂದಿದೆ. ಭದ್ರಾವತಿ ತಾಲ್ಲೂಕಿನಲ್ಲಿ ಒಟ್ಟು 3,990 ಪರೀಕ್ಷೆ ಬರೆದಿದ್ದು, 3,060 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 76.69 ಫಲಿತಾಂಶ ಬಂದಿದೆ. ಶಿಕಾರಿಪುರ ತಾಲ್ಲೂಕಿನಲ್ಲಿ ಒಟ್ಟು 2,765 ಪರೀಕ್ಷೆ ಬರೆದಿದ್ದು, 2,065 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಶೇ 74.68 ಫಲಿತಾಂಶ ಬಂದಿದೆ.

ನಗರದ ಎಜುಕೇರ್ ಶಾಲೆಯ ವಿದ್ಯಾರ್ಥಿನಿ ಶ್ರೇಯಾ ಎಸ್.ಭಾರದ್ವಾಜ್ 619 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ 7 ನೇ ಸ್ಥಾನ ಪಡೆದಿದ್ದಾರೆ. ಶಾಲೆಯ 10 ವಿದ್ಯಾರ್ಥಿಗಳು ಉನ್ನತ ಸಾಧನೆಯನ್ನು ಮಾಡಿದ್ದಾರೆ. ಶ್ರೀಕೃಷ್ಣ ಕಂಟಿ 604 ಅಂಕಗಳು, ಧನ್ಯಶ್ರೀ 585 ಅಂಕ, ಎಂ.ಎಲ್.ಸಿಂಧು 558, ಅಕ್ಷತಾ 557, ಕೆ.ಮನೋಜ್ 556, ನಮ್ರತಾ 545, ಐಶ್ವರ್ಯ ಪ್ರಭು 538, ಗಣೇಶ್ ರಾಯ್ಕರ್ 526 ಹಾಗೂ ರಾಧಿಕಾ 521 ಅಂಕಗಳನ್ನು ಗಳಿಸಿದ್ದಾರೆ.

ಡಾ.ಬಿ.ಆರ್. ಅಂಬೇಡ್ಕರ್ ಪರಿಶಿಷ್ಟ ಜಾತಿ, ವರ್ಗದ ಪ್ರತಿಭಾನ್ವಿತ ಬಾಲಕಿಯರ ವಸತಿ ಶಾಲೆಯ ವಿದ್ಯಾರ್ಥಿನಿ ಅನುಶ್ರೀ ಎಸ್ಸೆಸ್ಸೆಲ್ಸಿ ಪರೀಕ್ಷೇಯಲ್ಲಿ ಒಟ್ಟು 612 ಅಂಕ ಪಡೆದಿದ್ದಾರೆ. ನಾಗರತ್ನ 589 ಅಂಕ, ಅಕ್ಷತಾ ಸದಾಶಿವ ಪೂಜಾರಿ 586 ಅಂಕ, ಕೆ.ಅಂಬಿಕಾ 542 ಅಂಕ ಪಡೆದಿದ್ದಾರೆ.

ಹೊಳಲೂರಿನ ಮಾರುತಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ಎಚ್.ಜೆ.ದೀಪಿಕಾ  562 ಅಂಕ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT