ಲಾಲ್‌ಬಾಗ್‌: ಶುಲ್ಕ ಹೆಚ್ಚಿಸದಿರಲು ಆಗ್ರಹ

6

ಲಾಲ್‌ಬಾಗ್‌: ಶುಲ್ಕ ಹೆಚ್ಚಿಸದಿರಲು ಆಗ್ರಹ

Published:
Updated:

ಬೆಂಗಳೂರು: ‘ಸಸ್ಯಕಾಶಿಯ ಕೆಂಪು ತೋಟದ ಅಭಿವೃದ್ಧಿ ಶೂನ್ಯವಾಗಿದೆ. ಈ ಮಧ್ಯೆ ಪಾರ್ಕಿಂಗ್‌ ಶುಲ್ಕ ಏರಿಕೆ ಮಾಡಿ, ವ್ಯಾಪಾರೀಕರಣ ಮಾಡುತ್ತಿರುವುದು ನಿಲ್ಲಲಿ’ ಎಂದು ಕರ್ನಾಟಕ ನಡಿಗೆದಾರರ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಪ್ರತಿನಿಧಿ ಶ್ರೀನಿವಾಸ್‌, ‘ಲಾಲ್‌ಬಾಗ್‌ನಲ್ಲಿ ಮಾಡಬೇಕಾದ ಅಭಿವೃದ್ಧಿ ಕಾರ್ಯಗಳು ಸಾಕಷ್ಟಿವೆ. ಅದನ್ನೆಲ್ಲ ಬಿಟ್ಟು, ಪಾರ್ಕಿಂಗ್‌ ಹೆಸರಿನಲ್ಲಿ ಬಾಷ್‌ ಕಂಪನಿಗೆ ಅಲ್ಲಿನ ಜಾಗವನ್ನು ಭೋಗ್ಯಕ್ಕೆ ನೀಡಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಗಬ್ಬು ನಾರುತ್ತಿರುವ ಮತ್ಸ್ಯಾಲಯ, ಮರಿಗೌಡರ ಕಾಲದ ಗ್ರಂಥಾಲಯ ಉಪಯೋಗವಾಗದೆ ನಲುಗುತ್ತಿದೆ. ವಾಯುವಿಹಾರಿಗಳು, ಪ್ರವಾಸಿಗರು ವಾಹನ ನಿಲ್ಲಿಸಲು ಈಗಾಗಲೇ ಸಾಕಷ್ಟು ಸ್ಥಳಾವಕಾಶವಿದೆ. 25 ಎಕರೆ ಜಾಗದಲ್ಲಿ ಔಷಧಿ ಗಿಡಮೂಲಿಕೆಗಳನ್ನು ಬೆಳೆಸಬಹುದಿತ್ತು. ಇದನ್ನೆಲ್ಲ ಬಿಟ್ಟು, ಅಲ್ಲಿನ ಪರಿಸರಕ್ಕೆ ಹಾನಿಯಾಗುವಂತೆ ಕಾಂಕ್ರಿಟ್‌ ಕಾಡು ನಿರ್ಮಿಸಬಾರದು’ ಎಂದು ಆಗ್ರಹಿಸಿದರು.

‘ಈ ಕೂಡಲೇ ಪಾರ್ಕಿಂಗ್‌ ಜಾಗವನ್ನು ಹಿಂಪಡೆದು, ಸಸ್ಯಕಾಶಿಯನ್ನು ಅಭಿವೃದ್ಧಿ‍ಪಡಿಸಬೇಕು. ಇಲ್ಲದಿದ್ದಲ್ಲಿ ವಾಯುವಿಹಾರಿಗಳು, ನಾಗರಿಕರು ಹೋರಾಟದ ಹಾದಿಯನ್ನು ಹಿಡಿಯಬೇಕಾಗುತ್ತದೆ’ ಎಂದು ಎಚ್ಚರಿಸಿದರು. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !