ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಒತ್ತುವರಿ: ವಕೀಲನಿಗೆ ಜೈಲು

Last Updated 3 ಜನವರಿ 2019, 19:52 IST
ಅಕ್ಷರ ಗಾತ್ರ

ಬೆಂಗಳೂರು: ಕೆರೆ ಜಾಗ ಒತ್ತುವರಿ ಮಾಡಿದ ಆರೋಪದಲ್ಲಿ ವಕೀಲ ಸೇರಿದಂತೆ ಮೂವರು ವ್ಯಕ್ತಿಗಳಿಗೆ ಮೂರು ವರ್ಷ ಜೈಲು ಹಾಗೂ ತಲಾ ₹25 ಸಾವಿರ ದಂಡ ವಿಧಿಸಿ ಭೂ ಕಬಳಿಕೆ ತಡೆ ವಿಶೇಷ ನ್ಯಾಯಾಲಯ ಗುರುವಾರ ಆದೇಶ ಹೊರಡಿಸಿದೆ.

ನ್ಯಾಯಮೂರ್ತಿ ಎಚ್‌.ಎನ್‌.ನಾರಾಯಣ, ನ್ಯಾಯಾಂಗ ಸದಸ್ಯ ಬಿ.ಬಾಲಕೃಷ್ಣ ಹಾಗೂ ಕಂದಾಯ ಸದಸ್ಯ ಬಿ.ಆರ್‌.ಜಯರಾಮರಾಜೇ ಅರಸ್‌ ಅವರನ್ನು ಒಳಗೊಂಡ ಪೀಠ ಈ ಆದೇಶ ಹೊರಡಿಸಿತು.

ತುಮಕೂರಿನ ಚಿನಗಾ ಗ್ರಾಮದ ವಕೀಲ ಶಿವರಾಮ ವೆಂಕಟರಾಮಯ್ಯ ಎಚ್‌., ಕೊಡತನಹಳ್ಳಿ ಗ್ರಾಮದ ಚಿಕ್ಕವೀರಯ್ಯ ಹಾಗೂ ಎಚ್‌.ಎನ್‌.ವೆಂಕಟರಾಮಯ್ಯ ಶಿಕ್ಷೆಗೆ ಒಳಗಾದವರು.

ವಕೀಲರೊಬ್ಬರಿಗೆ ಭೂಕಬಳಿಕೆ ನ್ಯಾಯಾಲಯ ಶಿಕ್ಷೆ ವಿಧಿಸಿರುವುದು ಇದೇ ಮೊದಲು.

ಚಿನಗಾ ಗ್ರಾಮದ ಸರ್ವೆ ಸಂಖ್ಯೆ 17/1ರಲ್ಲಿ ಕೆರೆ ನಿರ್ಮಾಣಕ್ಕೆ ಸರ್ಕಾರ 1978ರಲ್ಲಿ 7 ಎಕರೆ 13 ಗುಂಟೆ ಭೂಸ್ವಾಧೀನ ಮಾಡಿಕೊಂಡಿತ್ತು. ಭೂಮಾಲೀಕರಿಗೆ ಪರಿಹಾರ ನೀಡಲಾಗಿತ್ತು.

ಈ ಜಾಗವನ್ನು ಮೂವರು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿದ್ದರು ಹಾಗೂ ಕೃಷಿ ಚಟುವಟಿಕೆ ನಡೆಸಿದ್ದರು. ಈ ಸಂಬಂಧ ಭೂಕಬಳಿಕೆ ನ್ಯಾಯಾಲಯದಲ್ಲಿ 2016ರಲ್ಲಿ ಪ್ರಕರಣ ದಾಖಲಾಗಿತ್ತು.

ಸರ್ಕಾರದ ಪರ ಬಿ.ಎಸ್‌.ಪಾಟೀಲ ವಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT