ಬುಧವಾರ, ನವೆಂಬರ್ 20, 2019
21 °C
ಉಜ್ವಲ್‌ಕುಮಾರ್ ಘೋಷ್‌ಗೆ ಒಂದೇ ದಿನಕ್ಕೆ ವರ್ಗಾ

ಭೂ ಮಾಪನ ಇಲಾಖೆಗೆ ಮತ್ತೆ ಮೌದ್ಗಿಲ್

Published:
Updated:

ಬೆಂಗಳೂರು: ಭೂ ಮಾಪನ ಇಲಾಖೆ ಆಯುಕ್ತರನ್ನಾಗಿ ಮತ್ತೆ ಮುನಿಶ್ ಮೌದ್ಗಿಲ್ ಅವರನ್ನು ವರ್ಗಾವಣೆ ಮಾಡಲಾಗಿದೆ.

ಕಳೆದ ಮೂರೂವರೆ ವರ್ಷಗಳಿಂದ ಭೂ ಮಾಪನ ಇಲಾಖೆ ಆಯುಕ್ತರಾಗಿ ಅವರು ಕೆಲಸ ನಿರ್ವಹಿಸಿದ್ದರು. ಇತ್ತೀಚೆಗೆ ಮೈಸೂರಿನ ಆಡಳಿತ ತರಬೇತಿ ಸಂಸ್ಥೆ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಲಾಗಿತ್ತು. ಈಗ ಮತ್ತೆ ಅದೇ ಹುದ್ದೆಗೆ ವರ್ಗಾಯಿಸಲಾಗಿದೆ.

ಮೌದ್ಗಿಲ್ ವರ್ಗಾವಣೆ ನಂತರ ಆ ಜಾಗಕ್ಕೆ ವರ್ಗಾವಣೆಯಾಗಿದ್ದ ಎಂ.ಟಿ.ರೇಜು ಅವರ ವರ್ಗಾವಣೆಯನ್ನು ರದ್ದುಪಡಿಸಿ, ಸರ್ವ ಶಿಕ್ಷಣ ಅಭಿಯಾನದ ಯೋಜನಾ ನಿರ್ದೇಶಕ ಹುದ್ದೆಯಲ್ಲೇ ಮುಂದುವರಿಸಲಾಗಿತ್ತು. ನಂತರ ಈ ಜಾಗಕ್ಕೆ ವರ್ಗಾವಣೆಯಾಗಿದ್ದ, ಉಜ್ವಲ್‌ಕುಮಾರ್ ಘೋಷ್ ಗುರುವಾರವಷ್ಟೇ ಅಧಿಕಾರ ಸ್ವೀಕರಿಸಿದ್ದು, ಒಂದೇ ದಿನಕ್ಕೆ ಎತ್ತಂಗಡಿ ಮಾಡಲಾಗಿದೆ.

 

ಪ್ರತಿಕ್ರಿಯಿಸಿ (+)