ಉಪನ್ಯಾಸಕನ ಅಪಹರಿಸಿ ದರೋಡೆ

7

ಉಪನ್ಯಾಸಕನ ಅಪಹರಿಸಿ ದರೋಡೆ

Published:
Updated:

ಬೆಂಗಳೂರು: ಉಪನ್ಯಾಸಕರೊಬ್ಬರನ್ನು ಆಟೊದಲ್ಲಿ ಅಪಹರಿಸಿದ ಯುವತಿ ನೇತೃತ್ವದ ಗ್ಯಾಂಗ್, ಬೆದರಿಸಿ ಮೊಬೈಲ್‌ ಕಿತ್ತುಕೊಂಡಿದೆ. ಅಲ್ಲದೇ, ಎಟಿಎಂಗೆ ಕರೆದೊಯ್ದು ಹಣವನ್ನೂ ಡ್ರಾ ಮಾಡಿಸಿಕೊಂಡು ಪರಾರಿಯಾಗಿದೆ.

ಭಾನುವಾರ ರಾತ್ರಿ ಜಯನಗರದ 4ನೇ ಬ್ಲಾಕ್‌ನಲ್ಲಿ ಈ ಘಟನೆ ನಡೆದಿದೆ.

ಉಪನ್ಯಾಸಕ ಎಸ್‌.ಲೋಕನಾಥ್‌ ಊಟ ಮಾಡಲು ಹೋಟೆಲ್‌ವೊಂದಕ್ಕೆ ಬಂದಿದ್ದರು. ಅದೇ ಸಂದರ್ಭದಲ್ಲಿ ಅಲ್ಲಿಗೆ ಬಂದ ಯುವತಿ, ತಮ್ಮ ಸಂಬಂಧಿಕರೊಬ್ಬರಿಗೆ ತೊಂದರೆಯಾಗಿದೆ. ದಯವಿಟ್ಟು ಸಹಾಯಕ್ಕೆ ಬನ್ನಿ ಎಂದು ಲೋಕನಾಥ್‌ ಅವರನ್ನು ಕೇಳಿಕೊಂಡಿ
ದ್ದಾರೆ. ಇದನ್ನು ನಂಬಿದ ಲೋಕನಾಥ್‌, ಹಿಂಬಾಲಿಸಿ ಹೋಗಿದ್ದರು.

‘ಜಯನಗರದ 3ನೇ ಬ್ಲಾಕ್‌ಗೆ ಬರುತ್ತಿದ್ದಂತೆ ಚಾಕು ತೋರಿಸಿ, ಮೊಬೈಲ್‌, ₹ 6 ಸಾವಿರ ನಗದು ಕಿತ್ತುಕೊಂಡಿದ್ದಾರೆ. ಎಟಿಎಂಗೆ ಕರೆದೊಯ್ದು ₹ 6 ಸಾವಿರ ಡ್ರಾ ಮಾಡಿಸಿಕೊಂಡಿದ್ದಾರೆ. ಆಟೊದಲ್ಲಿ ಜಯನಗರ 9ನೇ ಬ್ಲಾಕ್‌ನ ಬಿಗ್‌ ಬಜಾರ್‌ ಬಳಿ ಬಿಟ್ಟು ಮೊಬೈಲ್‌ ಹಿಂತಿರುಗಿಸಿ ಪರಾರಿಯಾಗಿದ್ದಾರೆ’ ಎಂದು ಲೋಕನಾಥ್‌ ದೂರಿನಲ್ಲಿ ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 2

  Frustrated
 • 1

  Angry

Comments:

0 comments

Write the first review for this !