ದಯಾಮರಣ ಕೋರಿ ಸಿ.ಎಂಗೆ ಪತ್ರ ಬರೆದ ಮಹಿಳೆ

7

ದಯಾಮರಣ ಕೋರಿ ಸಿ.ಎಂಗೆ ಪತ್ರ ಬರೆದ ಮಹಿಳೆ

Published:
Updated:
Deccan Herald

ಚಳ್ಳಕೆರೆ: ಮಹಿಳೆಯೊಬ್ಬರು ಬೇಸತ್ತು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಪತ್ರದ ಮೂಲಕ ತಮ್ಮ ಒಡಲಾಳದ ನೋವನ್ನು ಭಾನುವಾರ ತೋಡಿಕೊಂಡಿದ್ದಾರೆ.

ಚಳ್ಳಕೆರೆ ತಾಲ್ಲೂಕು ದೊಡ್ಡೇರಿ ಗ್ರಾಮದ ಪಾರ್ವತಮ್ಮ (29) ಪತ್ರ ಬರೆದವರು. ಅವರು ಓದಿದ್ದು ಪಿಯುಸಿ. ಚಿತ್ರದುರ್ಗ ತಾಲ್ಲೂಕು ಕಾಟೀಹಳ್ಳಿ ಗ್ರಾಮದ ಮಹಾಂತೇಶ ಅವರನ್ನು ಪ್ರೀತಿಸಿ ಮುದುವೆಯಾಗಿದ್ದರು. ಮದುವೆಯಾದ ಏಳೇ ತಿಂಗಳಿಗೆ ಪತಿ ರಸ್ತೆ ಅಪಘಾತದಲ್ಲಿ ತೀರಿಹೋದರು.

ಈಗ ಮಡಿಲಲ್ಲಿ ಮೂರು ತಿಂಗಳ ಗಂಡು ಮಗು ಇದೆ. ಪತಿಯ ಮನೆಯಲ್ಲಿ ಅತ್ತೆ, ಮಾವ ಹಾಗೂ ಮೈದುನರ ನೆರವು ಇಲ್ಲದ ಕಾರಣ ಆಕೆ ಕಂದನನ್ನೆತ್ತಿಕೊಂಡು ತವರಿಗೆ ಹೋದರೆ, ಅಲ್ಲಿ ಅನಾರೋಗ್ಯದ ತಾಯಿ. ಕಿತ್ತು ತಿನ್ನುವ ಬಡತನ, ಇರಲಿಕ್ಕೆ ಸೂರಿಲ್ಲ. ತಾಯಿ ಶಿವಮ್ಮ, ಮಗುವೂ ಮುರಿದ ಜೋಪಡಿಯಲ್ಲೇ ದಿನಗಳನ್ನು ನೂಕುತ್ತಿದ್ದಾರೆ.

‘ನನ್ನ ಕಂದನಿಗೆ ಆಶ್ರಯ ಕೊಟ್ಟು, ನಿಮ್ಮಂತೆ ಹಾಗೂ ರವಿ.ಡಿ.ಚನ್ನಣ್ಣನವರ್ ಅವರಂತೆ ಜನ ಸೇವಕನ್ನಾಗಿ ಮಾಡಿ. ನನಗೆ ದಯಾಮರಣಕ್ಕೆ ಅವಕಾಶ ನೀಡಿ’ ಎಂದು ಮುಖ್ಯಮಂತ್ರಿಗೆ ಪಾರ್ವತಮ್ಮ ಪತ್ರ ಬರೆದಿದ್ದಾರೆ. ಇದನ್ನು ಅವರೇ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !