ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಐಸಿ ವಿಭಾಗೀಯ ವ್ಯವಸ್ಥಾಪಕರ ಸಮಾವೇಶಕ್ಕೆ ತೆರೆ

Last Updated 22 ಮೇ 2019, 19:29 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ಜೀವ ವಿ‌‌ಮಾ ನಿಗಮ (ಎಲ್‌ಐಸಿ) ವತಿಯಿಂದ 59ನೇ ಅಖಿಲ ಭಾರತೀಯ ವಿಭಾಗೀಯ ವ್ಯವಸ್ಥಾಪಕರ ಸಮಾವೇಶ ಮುಂಬೈನಲ್ಲಿ ನಡೆಯಿತು.

ಮೂರು ದಿನದ ಸಮಾವೇಶಕ್ಕೆ ಎಲ್‌ಐಸಿಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಂ.ಆರ್. ಕುಮಾರ್ ಚಾಲನೆ ನೀಡಿ, ನಿಗಮದ ಸಾಧನೆಗಳನ್ನು ವಿವರಿಸಿದರು. ‘ಎಲ್ಐಸಿಯು ಒಟ್ಟು ಮಾರುಕಟ್ಟೆಯ ಪಾಲಿನಲ್ಲಿ ಶೇ 74.71ರಷ್ಟು ಪಾಲು ಹೊಂದಿದೆ. 2018–19ನೇ ಸಾಲಿನಲ್ಲಿಶೇ 66.24ರಷ್ಟು ಮೊದಲ ವರ್ಷದ ಪ್ರೀಮಿಯಂ ವರಮಾನ ಗಳಿಸಿದೆ. ಇದರ ಮೊತ್ತ ₹1,42,192 ಕೋಟಿ’ ಎಂದು ವಿವರಿಸಿದರು.

ಸಮ್ಮೇಳನದಲ್ಲಿ 2018–19ನೇ ಸಾಲಿನ ಸಾಧಕರನ್ನು ಸನ್ಮಾನಿಸಲಾಯಿತು.ಐಡಿಬಿಐ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಶರ್ಮಾ ಭಾಷಣಕಾರರಾಗಿ ಭಾಗವಹಿಸಿದ್ದರು.ಕಳೆದ ಫೆಬ್ರವರಿಯಲ್ಲಿ ಐಡಿಬಿಐ ಬ್ಯಾಂಕುಎಲ್ಐಸಿ ಜತೆಗೆ ಒಪ್ಪಂದ ಮಾಡಿಕೊಂಡಿದ್ದು, ಮಾರ್ಚ್‌ನಲ್ಲಿ 20,980 ಪಾಲಿಸಿಗಳಿಂದ ₹139.70 ಕೋಟಿ ಪ್ರೀಮಿಯಂ ಮೊತ್ತವನ್ನು ಸಂಗ್ರಹಿಸಿದೆ. 2019–20ನೇ ಸಾಲಿನಲ್ಲಿ ಈವರೆಗೆ 1929 ಪಾಲಿಸಿ ವ್ಯವಹಾರ ನಡೆಸಿದ್ದು, ₹30.21ಕೋಟಿ ಪ್ರೀಮಿಯಂ ಮೊತ್ತವನ್ನು ಬ್ಯಾಂಕ್ ಸಂಗ್ರಹಿಸಿದೆ.

ಸಮ್ಮೇಳನಕ್ಕೆ ಎಲ್‌ಐಸಿಯ 113 ವಿಭಾಗಗಳ ಮುಖ್ಯಸ್ಥರು ಭಾಗವಹಿಸಿದ್ದರು. 8 ಪ್ರಾದೇಶಿಕ ವಲಯಗಳ ಮುಖ್ಯಸ್ಥರು ಕೂಡ ಬಂದಿದ್ದರು. ಕಾರ್ಯಾಚರಣೆ ಮುಖ್ಯಸ್ಥರು, ಕಾರ್ಯನಿರ್ವಾಹಕ ನಿರ್ದೇಶಕರು, ಆರ್ಥಿಕ ತಜ್ಞರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT