ಗುರುವಾರ , ನವೆಂಬರ್ 21, 2019
22 °C

ಲಾಕರ್‌ ಕದ್ದೊಯ್ದ ಆರೋಪಿ ಸೆರೆ

Published:
Updated:

ಬೆಂಗಳೂರು: ಕಂಪನಿ ಮಾಲೀಕರ ಹಣವಿದ್ದ ಲಾಕರ್‌ ಕದ್ದೊಯ್ದಿದ್ದ ನೌಕರನನ್ನು ಕೇವಲ 24 ಗಂಟೆಯಲ್ಲಿ ಬಂಧಿಸುವಲ್ಲಿ ಬಂಡೇಪಾಳ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಅಸ್ಸಾಂನ ಕರೀಂಗಂಜ್‌ ಜಿಲ್ಲೆಯ ಮುಜಾಕೀರ್‌ ಹುಸೇನ್‌ ಬಂಧಿತ ಆರೋಪಿ. ಆತನಿಂದ ₹ 12 ಲಕ್ಷ ವಶಪಡಿಸಿಕೊಳ್ಳಲಾಗಿದೆ.

ಆರೋಪಿಯು ಬಂಡೇಪಾಳ್ಯದ ಮುನೇಶ್ವರ ನಗರದ ಪ್ರಸಿದ್ಧ ನಿಜಾಂಕಾರ್ಟ್‌ ಪ್ರೈವೇಟ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಕಂಪನಿ ಮಾಲೀಕರು ಹೊರಗಡೆ ಹೋಗಿದ್ದಾಗ ಲಾಕರ್‌ ಮುರಿದು ಹಣ ಕದಿಯಲು ಆರೋಪಿ ಯತ್ನಿಸಿದ್ದ. ಆದರೆ, ಅದು ಸಾಧ್ಯವಾಗದೇ ಇದ್ದಾಗ ಲಾಕ‌ರ್‌ನ್ನೇ ಕಳವು ಮಾಡಿದ್ದ.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಪರಾರಿಗೆ ಯತ್ನಿಸಿದ ಆರೋಪಿಯನ್ನು ವಶಕ್ಕೆ ಪಡೆದರು.

ಪ್ರತಿಕ್ರಿಯಿಸಿ (+)