ಕೊಲೆಗೆ ಕಾರಣವಾದ ‘ಲೂಡೊ’

ಬುಧವಾರ, ಜೂನ್ 19, 2019
31 °C

ಕೊಲೆಗೆ ಕಾರಣವಾದ ‘ಲೂಡೊ’

Published:
Updated:

ಬೆಂಗಳೂರು: ಕುಮಾರಸ್ವಾಮಿ ಲೇಔಟ್ ಬಳಿಯ ಇಲಿಯಾಸ್ ನಗರದಲ್ಲಿ ‘ಲೂಡೊ’ ಮೊಬೈಲ್ ಗೇಮ್ ಆಡುವ ವಿಚಾರದಲ್ಲಿ ಶುರುವಾದ ಜಗಳ ಶೇಖ್ ಮಿಲನ್ (32) ಎಂಬುವರ ಕೊಲೆಯಲ್ಲಿ ಅಂತ್ಯವಾಗಿದೆ.

‘ಬೇಂದ್ರೆ ನಗರ ನಿವಾಸಿ ಆಗಿದ್ದ ಶೇಕ್‌, ಫ್ಯಾಬ್ರಿಕೇಷನ್ ಕೆಲಸ ಮಾಡುತ್ತಿದ್ದರು. ಅವರ ಕೊಲೆ ಸಂಬಂಧ ಸ್ನೇಹಿತರಾದ ಶೋಯಿಲ್, ಅಲಿ, ಅಸು ಹಾಗೂ ನಯಾಝ್ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಕುಮಾರಸ್ವಾಮಿ ಲೇಔಟ್ ಪೊಲೀಸರು ಹೇಳಿದರು.

‘ಪಶ್ಚಿಮ ಬಂಗಾಳದ ಶೇಖ್, ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದರು. ಪತ್ನಿ ಹಾಗೂ ಇಬ್ಬರು ಮಕ್ಕಳ ಸಮೇತ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಶೇಕ್ ಹಾಗೂ ಅವರ ಸ್ನೇಹಿತರು ಸಮಯ ಸಿಕ್ಕಾಗಲೆಲ್ಲ ಹಣ ಕಟ್ಟಿ ಲೂಡೊ ಗೇಮ್ ಆಡುತ್ತಿದ್ದರು. ಶುಕ್ರವಾರ ತಡರಾತ್ರಿಯೂ ತಲಾ ₹ 200 ಕಟ್ಟಿ ಇಲಿಯಾಸ್ ನಗರದಲ್ಲಿ ಸಾಮೂಹಿಕವಾಗಿ ಮೊಬೈಲ್‌ನಲ್ಲಿ ’ಲೂಡೊ’ ಗೇಮ್ ಆಡುತ್ತಿದ್ದರು.

‘ಗೇಮ್‌ ಕೊನೆಯ ಹಂತದಲ್ಲಿರುವಾಗಲೇ ಶೇಖ್ ಮಿಲನ್ ಒತ್ತಬೇಕಿದ್ದ ಬಟನ್‌ನನ್ನು ಸ್ನೇಹಿತ ಶೋಯಿಲ್ ಒತ್ತಿದ್ದ. ಅದನ್ನು ಶೇಖ್ ಪ್ರಶ್ನಿಸಿದ್ದರು. ಕೋಪಗೊಂಡ ಶೋಯಿಲ್ ಹಾಗೂ ಇತರರು, ಅವರ ಜೊತೆ ಜಗಳ ತೆಗೆದಿದ್ದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಶೇಖ್ ಅವರ ಕಿವಿ ಬಳಿ ಚಾಕುವಿನಿಂದ ಇರಿಯಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಸ್ಥಳದಲ್ಲೇ ಕುಸಿದು ಬಿದ್ದು ನರಳಾಡುತ್ತಿದ್ದ ಶೇಖ್‌ ಅವರನ್ನು ಸ್ಥಳೀಯರೇ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಅವರು ಮಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದರು’ ಎಂದು ಪೊಲೀಸರು ವಿವರಿಸಿದರು.

ಚಾಕು ಸಮೇತ ಬಂದಿದ್ದ: ‘ಶೇಖ್ ಸೇರಿದಂತೆ ಐದು ಮಂದಿ ಸ್ನೇಹಿತರು ಸ್ಥಳದಲ್ಲಿ ಇದ್ದರು. ಚಾಕು ಇಟ್ಟುಕೊಂಡೇ ಶೋಯಿಲ್ ಗೇಮ್ ಆಡಲು ಬಂದಿದ್ದ’ ಎಂದು ಪೊಲೀಸರು ಹೇಳಿದರು. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !