ಅಂಚೆ ಮತದಾನದಲ್ಲೂ ಮುಂದು, ನೋಟಾಕ್ಕೂ ಬೆಂಬಲ

ಗುರುವಾರ , ಜೂನ್ 27, 2019
29 °C
ಕೊಪ್ಪಳ ಲೋಕಸಭೆ ಚುನಾವಣೆ ಫಲಿತಾಂಶ

ಅಂಚೆ ಮತದಾನದಲ್ಲೂ ಮುಂದು, ನೋಟಾಕ್ಕೂ ಬೆಂಬಲ

Published:
Updated:
Prajavani

ಕೊಪ್ಪಳ: ಲೋಕಸಭಾ ಕ್ಷೇತ್ರದ ಮತ ಎಣಿಕೆ ಗುರುವಾರ ಇಲ್ಲಿನ ಗವಿಸಿದ್ಧೇಶ್ವರ ಮಹಾವಿದ್ಯಾಲಯದಲ್ಲಿ ಬೆಳಿಗ್ಗೆ 8ಕ್ಕೆ ಆರಂಭಗೊಂಡಿತು. ಮೊದಲ ಸುತ್ತಿನಿಂದ 21ನೇ ಸುತ್ತಿನವರೆಗೆ ಸತತ ಮುನ್ನಡೆ ಸಾಧಿಸಿದ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ 5,86,783 ಮತ ಪಡೆದು ಗೆಲುವಿನ ನಗೆ ಬೀರಿದರು.

ಕಾಂಗ್ರೆಸ್ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ 5,48,386 ಮತ ಪಡೆದು 38,397 ಮತಗಳ ಅಂತರದಿಂದ ಸೋಲು ಕಂಡರು.

ವಿಧಾನ ಸಭಾ ಕ್ಷೇತ್ರವಾರು ಫಲಿತಾಂಶ: ಸಂಗಣ್ಣ ಕರಡಿ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ 71,441, ಮಸ್ಕಿ-64,538, ಕುಷ್ಟಗಿ-72,474, ಕನಕಗಿರಿ-77,059, ಗಂಗಾವತಿ-70,287, ಯಲಬುರ್ಗಾ-76,621, ಕೊಪ್ಪಳ-91,124, ಸಿರಗುಪ್ಪ-61,453 ಸೇರಿ ಒಟ್ಟು 5,86,783 ಮತಗಳನ್ನು ಪಡೆದಿದ್ದಾರೆ.

ಹಿಟ್ನಾಳ ಪಡೆದ ಮತ: ಸಿಂಧನೂರ- 71,361, ಮಸ್ಕಿ-52,467, ಕುಷ್ಟಗಿ-64,649, ಕನಕಗಿರಿ-69,763, ಗಂಗಾವತಿ-67,751, ಯಲಬುರ್ಗಾ-68,549, ಕೊಪ್ಪಳ-79,446, ಸಿರಗುಪ್ಪ- 73,587 ಸೇರಿ ಒಟ್ಟು 5,47,573 ಮತಗಳನ್ನು ಪಡೆದಿದ್ದಾರೆ.

ಅಂಚೆ ಮತಗಳ ವಿವರ: ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ 1,786, ರಾಜಶೇಖರ ಹಿಟ್ನಾಳ 813 ಮತ ಪಡೆದಿದ್ದಾರೆ.

ನೋಟಾ ಮತಗಳು: ಅಂಚೆ ಮತಪತ್ರ ಸೇರಿದಂತೆ 10,813 ನೋಟಾ ಮತಗಳು ಚಲಾವಣೆಯಾಗಿವೆ.

ಮತಗಟ್ಟೆ ಹಾಗೂ ಎಣಿಕಾ ಸುತ್ತು: ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2.033 ಮತಗಟ್ಟೆ ಸ್ಥಾಪಿಸಲಾಗಿತ್ತು. 21 ಸುತ್ತಗಳ ಮತ ಎಣಿಕಾ ಕಾರ್ಯ ನಡೆದು ಕೊನೆಗೆ ಫಲಿತಾಂಶ ಘೋಷಿಸಲಾಯಿತು.

ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದೇ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಮತ ಎಣಿಕೆ ನಡೆಯಿತು. ಸಾರ್ವಜನಿಕರಿಗೆ ಮತ ಎಣಿಕೆಯ ಎಲ್ಲ ಹಂತದ ಮಾಹಿತಿಯನ್ನು ಸಹ ಧ್ವನಿವರ್ಧಕ, ಎಲ್‌ಇಡಿ ಮೂಲಕ ಪ್ರದರ್ಶನ ಮಾಡಲಾಯಿತು.

ಕುಸಿದು ಬಿದ್ದ ಚುನಾವಣೆ ಸಿಬ್ಬಂದಿ: 

ಮತ ಎಣಿಕೆ ವೇಳೆ ಚುನಾವಣಾ ಕಾರ್ಯಕ್ಕೆ ನಿಯೋಜಿಸಿದ್ದ ಜಿಲ್ಲಾ ಆಡಳಿತ ಭವನದಲ್ಲಿ ಪಿಜಿಬಿ ಬ್ಯಾಂಕಿನ ಕ್ಯಾಷಿಯರ್ ಶಿವಕುಮಾರ್ ಎಂಬುವರು ಅಸ್ವಸ್ಥಗೊಂಡು ಕುಸಿದು ಬಿದ್ದರು. ತಕ್ಷಣ ಪೊಲೀಸರು ನಗು-ಮಗು ವಾಹನದ ಮೂಲಕ ಆಸ್ಪತ್ರೆಗೆ ಸಾಗಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !