ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬ್ಬಂದಿಯಿಂದಲೇ ಸಾರಿಗೆ ಸಂಸ್ಥೆಗೆ ನಷ್ಟ: ದೂರು

Last Updated 2 ಜನವರಿ 2019, 20:22 IST
ಅಕ್ಷರ ಗಾತ್ರ

ಬೆಂಗಳೂರು: ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಮತ್ತು ತುಮಕೂರು ಜಿಲ್ಲಾಧಿಕಾರಿ ನೀಡಿರುವ ಆದೇಶಗಳನ್ನು ಸಂಸ್ಥೆಯ ತುಮಕೂರು ವಿಭಾಗದ ಚಾಲನಾ ಸಿಬ್ಬಂದಿ ಪಾಲಿಸದೇ ಇರುವುದರಿಂದ ₹36 ಕೋಟಿ ನಷ್ಟ ಉಂಟಾಗುತ್ತಿದೆ ಎಂದು ರಾಷ್ಟ್ರೀಯ ಕಿಸಾನ್ ಸಂಘಟನೆ ದೂರಿದೆ.

‘ಬೆಂಗಳೂರು–ತುಮಕೂರು ಮಾರ್ಗದಲ್ಲಿ ದಾಬಸ್‌ಪೇಟೆ ಮತ್ತು ನೆಲಮಂಗಲಕ್ಕೆ ಹೋಗುವ ಸರ್ಕಾರಿ ಬಸ್‌ಗಳಲ್ಲಿ ಚಾಲಕರು ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿಲ್ಲ. ಖಾಸಗಿ ಬಸ್‌ಗಳ ಸಿಬ್ಬಂದಿ ಜತೆ ಅವರು ಶಾಮೀಲಾಗಿರುವುದೇ ಇದಕ್ಕೆ ಕಾರಣ. ಇದರಿಂದ ಸಂಸ್ಥೆಗೆ ಅಪಾರ ಪ್ರಮಾಣದಲ್ಲಿ ನಷ್ಟ ಆಗುತ್ತಿದೆ’ ಎಂದು ಸಂಘಟನೆ ಅಧ್ಯಕ್ಷ ವಿಜಯ್ ಕುಮಾರ್‌ ದೂರಿದರು.

‘ನೆಲಮಂಗಲದಿಂದ ಬರುವ ಬಸ್‌ಗಳು ಟೋಲ್ ಶುಲ್ಕ ಕಟ್ಟಬಾರದೆಂದು ಆದೇಶ ನೀಡಿದರೂ ₹ 140 (ಸರ್ಕಾರಿ ಬಸ್‌ ದಿನಕ್ಕೆ ಕಟ್ಟುತಿರುವ ಮೊತ್ತ) ಪಾವತಿಸುತ್ತಿವೆ (852 ಬಸ್‌ಗಳ ನಿತ್ಯ ಪ್ರಯಾಣ). ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಿದರೂ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಬಸ್‌ ನಿಲ್ದಾಣದ 100 ಮೀಟರ್‌ ಮುಂದೆ ಖಾಸಗಿ ಬಸ್‌ಗಳು ನಿಲುಗಡೆ ಮಾಡಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಬೇಕು. ಆದರೆ, ಇಲ್ಲಿ ತದ್ವಿರುದ್ಧವಾಗಿ ನಡೆಯುತ್ತಿದೆ. ಅಲ್ಲದೆ, ಪ್ರಯಾಣಿಕರಿಗೂ ಧಕ್ಕೆ ಉಂಟಾಗುವಂತೆ ಮಾಡುತ್ತಿದ್ದಾರೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT