ಎಲ್‌ ಆ್ಯಂಡ್‌ ಟಿ ಗೆ ಟರ್ಮಿನಲ್‌ ಕಾಮಗಾರಿ

7
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಜತೆ ಕಂಪನಿ ಒಪ್ಪಂದ

ಎಲ್‌ ಆ್ಯಂಡ್‌ ಟಿ ಗೆ ಟರ್ಮಿನಲ್‌ ಕಾಮಗಾರಿ

Published:
Updated:
Deccan Herald

ಬೆಂಗಳೂರು: ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್‌ ನಿರ್ಮಾಣ ಕಾಮಗಾರಿ ಗುತ್ತಿಗೆ ಲಾರ್ಸನ್‌ ಆ್ಯಂಡ್‌ ಟೂಬ್ರೊ (ಎಲ್‌ ಆ್ಯಂಡ್‌ ಟಿ) ಕಂಪನಿಯ ಪಾಲಾಗಿದೆ. 

ಎರಡನೇ ಟರ್ಮಿನಲ್‌ ಪೂರ್ಣಗೊಂಡಾಗ ವಾರ್ಷಿಕ ಎರಡೂವರೆ ಕೋಟಿ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯ ನಿಲ್ದಾಣಕ್ಕೆ ಒದಗಲಿದೆ. ಅದರ ವಿನ್ಯಾಸ, ಎಂಜಿನಿಯರಿಂಗ್‌, ಸಾಮಗ್ರಿ ಖರೀದಿ, ನಿರ್ಮಾಣ, ಪರೀಕ್ಷೆ ಮತ್ತು ಬಳಕೆಗೆ ಸಿದ್ಧಗೊಳಿಸುವ ಹೊಣೆಗಾರಿಕೆಯನ್ನು ಈ ಗುತ್ತಿಗೆ ಒಳಗೊಂಡಿದೆ. 

ವಿಮಾನ ನಿಲ್ದಾಣದ ವ್ಯವಸ್ಥೆಗಳ ಜತೆ ಹೊಂದಾಣಿಕೆ, ಹೊಸ ಸೌಲಭ್ಯಗಳ ನಿರ್ಮಾಣವನ್ನೂ ಈ ಕಾಮಗಾರಿ ಒಳಗೊಂಡಿದೆ. ಕಂಪನಿಯು ಈಗಾಗಲೇ ಇದೇ ನಿಲ್ದಾಣದಲ್ಲಿ ದಕ್ಷಿಣ ಸಮಾನಾಂತರ ರನ್‌ವೇ ಮತ್ತು ಪೂರಕ ನಿರ್ಮಾಣಗಳನ್ನು ಮಾಡುತ್ತಿದೆ.  

‘ಇಂಥ ಸಂಕೀರ್ಣ ವಿನ್ಯಾಸವುಳ್ಳ, ಜಾಗತಿಕ ಗುಣಮಟ್ಟ ಮತ್ತು ಸುರಕ್ಷತೆಯನ್ನೊಳಗೊಂಡ ನಿರ್ಮಾಣಗಳನ್ನು ಮಾಡಲು ನಮ್ಮ ಕಂಪನಿ ಸಾಮರ್ಥ್ಯ ಹೊಂದಿದೆ ಎಂಬುದನ್ನು ಈ ಗುತ್ತಿಗೆ ನಮ್ಮ ಪಾಲಾಗಿರುವುದು ಸೂಚಿಸುತ್ತದೆ. ನಮ್ಮ ಗ್ರಾಹಕರಿಗೆ ಕಂಪನಿ ಮೇಲೆ ವಿಶ್ವಾಸ ಮೂಡಿದೆ. ಹೀಗಾಗಿ ವಿಶ್ವದರ್ಜೆಯ ಇನ್ನೊಂದು ವಿಮಾನ ನಿಲ್ದಾಣ ನಿರ್ಮಾಣಕ್ಕೆ ನಮಗೆ ಅವಕಾಶ ಸಿಕ್ಕಿದೆ’ ಎಂದು ಕಂಪನಿಯ ಆಡಳಿತ ನಿರ್ದೇಶಕ ಎಸ್‌.ಎನ್‌.ಸುಬ್ರಹ್ಮಣ್ಯನ್‌ ಹೇಳಿದರು. 

ಎರಡನೇ ಟರ್ಮಿನಲ್‌ಗೆ ಅಮೆರಿಕದ ಸ್ಕಿಡ್‌ಮೋರ್‌, ಓವಿಂಗ್ಸ್‌ ಆ್ಯಂಡ್‌ ಮೆರಿಲ್‌ ಕಂಪನಿಗಳು ವಿನ್ಯಾಸ ರೂಪಿಸಿವೆ. 2021ರ ಮಾರ್ಚ್‌ 31ರ ಒಳಗೆ ಕಾಮಗಾರಿ ಮುಗಿಸಲು ಗಡುವು ನೀಡಲಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !