‘ರಾಜ್ಯಕ್ಕೆ ಮಹಾ ಅನ್ಯಾಯ’

7

‘ರಾಜ್ಯಕ್ಕೆ ಮಹಾ ಅನ್ಯಾಯ’

Published:
Updated:
Deccan Herald

ಹುಬ್ಬಳ್ಳಿ: ಮಹದಾಯಿ ನ್ಯಾಯಮಂಡಳಿಯು ರಾಷ್ಟ್ರದ ಜಲಸಂಪತ್ತನ್ನು ಅಸಮರ್ಪಕ ಹಂಚಿಕೆ ಮೂಲಕ ರಾಜ್ಯದ ಜನತೆಗೆ ಮಹಾ ಅನ್ಯಾಯ ಮಾಡಿದೆ. ತಕ್ಷಣವೇ ಮುಖ್ಯಮಂತ್ರಿಗಳು ಸಂಬಂಧಪಟ್ಟ ಸಂಸದರು, ಶಾಸಕರು, ರೈತ ಹೋರಾಟಗಾರರು, ತಜ್ಞರ ಸಭೆ ಕರೆಯಬೇಕು. ಕಾನೂನು ಹೋರಾಟ ಮುಂದುವರಿಸಬೇಕು.

ಮಹದಾಯಿ ನದಿಯಿಂದ 188 ಟಿಎಂಸಿ ಅಡಿ ನೀರು ಬಳಕೆ ಮಾಡಿಕೊಳ್ಳಬಹುದು ಎಂಬ ನಮ್ಮ ವಾದವನ್ನು ನ್ಯಾಯಮಂಡಳಿ ಒಪ್ಪಿಕೊಂಡಿದೆ. ಇದು ನಮಗೆ ಸಿಕ್ಕ ನೈತಿಕ ಗೆಲುವು. ಆದರೆ, ಅದರಲ್ಲಿನ 38 ಟಿಎಂಸಿ ಅಡಿ ನೀರನ್ನು ಮಾತ್ರ ಮೂರೂ ರಾಜ್ಯಗಳಿಗೆ ಹಂಚಿಕೆ ಮಾಡಿದೆ. ಉಳಿದ 150 ಟಿಎಂಸಿ ಅಡಿ ನೀರನ್ನು ಯಾವ ರಾಜ್ಯಕ್ಕೂ ಹಂಚಿಕೆ ಮಾಡಿಲ್ಲ. 

24 ಟಿಎಂಸಿ ಅಡಿ ನೀರನ್ನು ಗೋವಾಕ್ಕೆ, 13.5 ಟಿಎಂಸಿ ಅಡಿ ನೀರನ್ನು ಕರ್ನಾಟಕಕ್ಕೆ ಹಾಗೂ 1.2 ಟಿಎಂಸಿ ಅಡಿ ನೀರನ್ನು ಮಹಾರಾಷ್ಟ್ರಕ್ಕೆ ಹಂಚಿಕೆ ಮಾಡಿದೆ. ನಮಗೆ ಹಂಚಿಕೆ ಮಾಡಿರುವ ನೀರಿನ ಪೈಕಿ 8.2 ಟಿಎಂಸಿ ಅಡಿ ನೀರು ಜಲವಿದ್ಯುತ್‌ ಉತ್ಪಾದನೆಗೆ ನೀಡಲಾಗಿದೆ. ಆ ನೀರು ಮತ್ತೆ ಗೋವಾಕ್ಕೇ ಸೇರುತ್ತದೆ. ವಾಸ್ತವವಾಗಿ 32 ಟಿಎಂಸಿ ಅಡಿ ನೀರು ಗೋವಾಕ್ಕೇ ದೊರೆತಂತಾಗುತ್ತದೆ. ನಮ್ಮ ಪಾಲಿಗೆ 32.5 ಟಿಎಂಸಿ ಅಡಿ ನೀರು ಕೇಳಿದ್ದೆವು. ಅದನ್ನು ನ್ಯಾಯಮಂಡಳಿ ವಿಚಾರಣೆ ಸಂದರ್ಭದಲ್ಲಿ ಒಪ್ಪಿಕೊಂಡಿತ್ತು. ಆದರೆ, ಈಗ ಕೇವಲ 5.5. ಟಿಎಂಸಿ ಅಡಿ ಕೊಟ್ಟಿದೆ. ನಮಗೆ ನ್ಯಾಯವಾಗಿ ಸಿಗಬೇಕಿದ್ದ ನೀರೂ ಗೋವಾ ಪಾಲಾಗಿದೆ. 3.9 ಟಿಎಂಸಿ ಅಡಿ ನೀರನ್ನು ಮಲಪ್ರಭಾಗೆ ನದಿ ತಿರುವಿನ ಮೂಲಕ ಬಳಸಿಕೊಳ್ಳಬಹುದು ಎಂದು ಹೇಳಲಾಗಿದೆ. ಇದರಿಂದ ನಮಗೆ ಹೇಳಿಕೊಳ್ಳುವಂಥ ಪ್ರಯೋಜನ ಆಗುವುದಿಲ್ಲ. 

ನ್ಯಾಯಮಂಡಳಿಯು ಬೆಳಿಗ್ಗೆ ಕೇಂದ್ರ ಸರ್ಕಾರಕ್ಕೆ ತೀರ್ಪಿನ ಪ್ರತಿಯನ್ನು ನೀಡಿದ ಬಳಿಕ ಸಂಜೆ ಅದರ ಸಾರವನ್ನು ಪ್ರಕಟಿಸಿದೆ. ಇದರಿಂದಾಗಿ ನ್ಯಾಯಾಂಗದ ಘನತೆ ಕಡಿಮೆಯಾದಂತಾಗಿದೆ. ಇದು ಸರಿಯಾದ ಕ್ರಮವಲ್ಲ. ನ್ಯಾಯಮಂಡಳಿಯೇನೂ ತನಿಖಾ ಆಯೋಗವಲ್ಲ. ಜನರ ಮುಂದೆ ಮೊದಲು ತೀರ್ಪು ಓದಿ ಬಳಿಕ ಕೇಂದ್ರಕ್ಕೆ ಸಲ್ಲಿಸಬೇಕಿತ್ತು.

-ಎಚ್‌.ಕೆ. ಪಾಟೀಲ್‌ , ಶಾಸಕ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !