ಸಂಭ್ರಮದ ಜೋಡೆತ್ತಿನ ಮೆರವಣಿಗೆ

7

ಸಂಭ್ರಮದ ಜೋಡೆತ್ತಿನ ಮೆರವಣಿಗೆ

Published:
Updated:
Prajavani

ಬೆಂಗಳೂರು: ಹೆಸರಘಟ್ಟದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜೋಡೆತ್ತಿನ ಮೆರವಣಿಗೆ ನಡೆಯಿತು.

ಎತ್ತುಗಳ ಪಾದ ಪೂಜೆ ಮಾಡಿದ ಗ್ರಾಮಸ್ಥರು ಮಳೆಗಾಗಿ ವಿಶೇಷ ಪ್ರಾರ್ಥನೆ ಮಾಡಿದರು.
ಡೊಳ್ಳು ಕುಣಿತ, ಪಟ ಕುಣಿತಗಳು ಮೆರವಣಿಗೆ ವಿಶೇಷ ಕಳೆ ತಂದವು. ಚಿಣ್ಣರು ಡೊಳ್ಳಿನ ನಾದಕ್ಕೆ ಮೈ ಮರೆತು ನರ್ತಿಸಿದರು.

‘ಹೆಸರಘಟ್ಟವನ್ನು ಹಿಂದೆ ವ್ಯಾಸರಘಟ್ಟ ಎಂದು ಕರೆಯುತ್ತಿದ್ದರು. ವ್ಯಾಸರು ಈ ಊರಿಗೆ ಬಂದು ತಪಸ್ಸು ಮಾಡಿದರು. ವ್ಯಾಸರು ತಪಸ್ಸು ಮಾಡಿದ ಕಾಲದಲ್ಲಿ ಜೋಡಿ ಎತ್ತುಗಳು ಅವರನ್ನು ಕಾಯುತ್ತಿದ್ದವು ಎಂದು ನಮ್ಮ ಹಿರಿಯರು ಹೇಳಿದ್ದರು. ಅಂದಿನಿಂದಲೂ ಜೋಡೆತ್ತಿನ ಪೂಜೆಯನ್ನು ಮಾಡುತ್ತಾ ಬರಲಾಗಿದೆ’ ಎಂದು ಗ್ರಾಮದ ನಿವಾಸಿ ಹಿರಿಯರಾದ ಸೋಮಜ್ಜ ಹೇಳಿದರು. ‘ಹಿಂದಿನಿಂದಲೂ ಈ ಪದ್ಧತಿ ನಡೆದುಕೊಂಡು ಬಂದಿದೆ. ಈ ಬಾರಿ ಮಳೆಯಾಗದಿರುವುದರಿಂದ ಮಳೆಗಾಗಿ ಪ್ರಾರ್ಥನೆ ಸಲ್ಲಿಸಲಾಗಿದೆ’ ಎಂದು ಗ್ರಾಮದ ನಿವಾಸಿ ಮಂಜುನಾಥ್ ಹೇಳಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !