ವಿನೋದ್‌ರಾಜ್‌ ಕಾರಿನಲ್ಲಿ ಹಣ ಕದ್ದಿದ್ದ ಆರೋಪಿ ಸೆರೆ

7

ವಿನೋದ್‌ರಾಜ್‌ ಕಾರಿನಲ್ಲಿ ಹಣ ಕದ್ದಿದ್ದ ಆರೋಪಿ ಸೆರೆ

Published:
Updated:
Deccan Herald

ನೆಲಮಂಗಲ: ಸಿನಿಮಾ ನಟ ವಿನೋದ್ ರಾಜ್ ಕಾರಿನಲ್ಲಿದ್ದ ₹ 1ಲಕ್ಷ ಹಣವನ್ನು ಕದ್ದು ಪರಾರಿಯಾಗಿದ್ದ ನಾಲ್ವರು ಆರೋಪಿಗಳ ಪೈಕಿ ಒಬ್ಬನನ್ನು ನೆಲಮಂಗಲ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶ ಚಿತ್ತೂರು ಜಿಲ್ಲೆಯ ಓಜಿಕುಪ್ಪಂ ನಿವಾಸಿ ಸ್ಯಾಮ್ಸನ್ (24) ಬಂಧಿತ ಆರೋಪಿ.

ಸೆಪ್ಟಂಬರ್ 28ರಂದು ನಗರಕ್ಕೆ ಬಂದಿದ್ದ ವಿನೋದ್‌ರಾಜ್‌, ಬ್ಯಾಂಕ್‌ನಲ್ಲಿ ₹1ಲಕ್ಷ ಹಣ ಡ್ರಾ ಮಾಡಿ ಕಾರಿನಲ್ಲಿಟ್ಟು, ಪಂಚರ್ ಆಗಿದ್ದ ಕಾರಿನ ಚಕ್ರವನ್ನು ಬದಲಿಸುತ್ತಿದ್ದರು. ಇದೇ ವೇಳೆ ಸ್ಥಳಕ್ಕೆ ಬಂದ ನಾಲ್ವರ ಗುಂಪು, ವಿನೋದ್ ರಾಜ್ ಮತ್ತು ಅವರ ಸ್ನೇಹಿತರ ಗಮನ ಬೇರೆಡೆಗೆ ಸೆಳೆದು, ಹಣ ಕದ್ದು ಪರಾರಿಯಾಗಿದ್ದರು.

ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನವೆಂಬರ್ 7 ರಂದು ಅದೇ ಬ್ಯಾಂಕ್‌ ಬಳಿ ಕಳವು ಮಾಡಲು ಹೊಂಚು ಹಾಕುತ್ತಿದ್ದ ವ್ಯಕ್ತಿಯನ್ನು ಕಂಡು, ಅನುಮಾನಗೊಂಡ ಪೊಲೀಸರು ಕಾರ್ಯಚರಣೆ ನಡೆಸಿ ಆರೋಪಿಯನ್ನು ಸೆರೆ ಹಿಡಿದಿದ್ದಾರೆ. ವಿಚಾರಣೆ ವೇಳೆ ವಿನೋದ್‌ರಾಜ್‌ ಕಾರಿನಲ್ಲಿ ಹಣ ಕಳವು ಮಾಡಿದ ಪ್ರಕರಣ ಕೂಡ ಬೆಳಕಿಗೆ ಬಂದಿದೆ. ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೂ ಮೂವರು, ಚಿನ್ನ (34), ತುಳಸಿ (27), ಮತ್ತು ನರೇಶ್ (26) ಅವರ ಪತ್ತೆಗೆ ಹುಡುಕಾಟ ನಡೆದಿದೆ.

 

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !