ಮೋಕ್ಷಕ್ಕಾಗಿ ಆತ್ಮಹತ್ಯೆಗೆ ಪ್ರಚೋದನೆ: ವಿಡಿಯೊ ವೈರಲ್‌

7

ಮೋಕ್ಷಕ್ಕಾಗಿ ಆತ್ಮಹತ್ಯೆಗೆ ಪ್ರಚೋದನೆ: ವಿಡಿಯೊ ವೈರಲ್‌

Published:
Updated:

ಮಂಡ್ಯ: ಮೋಕ್ಷಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ತೃತೀಯಲಿಂಗಿ ಮಾಂತ್ರಿಕರೊಬ್ಬರು ಪ್ರಚೋದನೆ ನೀಡುತ್ತಿದ್ದಾರೆ ಎಂದು ಮಹಿಳೆಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ತಾಲ್ಲೂಕಿನ ಮಾರಗೌಡನಹಳ್ಳಿ ಗ್ರಾಮ ಮೂಲದ ಅನಿತಾ ಆತ್ಮಹತ್ಯೆ ಪ್ರಚೋದನೆ ಕುರಿತು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಕುಟುಂಬದ ಸದಸ್ಯರೆಲ್ಲರೂ ಆತ್ಮಹತ್ಯೆ ಮಾಡಿಕೊಂಡರೆ ಎಲ್ಲರಿಗೂ ಮೋಕ್ಷ ಸಿಗುತ್ತದೆ ಎಂದು ಮಾಂತ್ರಿಕ ಪ್ರಚೋದನೆ ನೀಡುತ್ತಿದ್ದಾನೆ ಎಂದು ಹೇಳುವ ದೃಶ್ಯ ವಿಡಿಯೊದಲ್ಲಿ ಇದೆ. ಅನಿತಾ ಮೈಸೂರಿನ ಬೆಳವಾಡಿಯಲ್ಲಿ ವಾಸವಾಗಿದ್ದಾರೆ. ಅವರ ಪತಿ ಹುಣಸೂರಿನಲ್ಲಿ ಟೇಲರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

ಪರಿಶೀಲನೆ: ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದಂತೆ ಕೆರಗೋಡು ಪೊಲೀಸರು ಮಾರಗೌಡನಹಳ್ಳಿ ಗ್ರಾಮಕ್ಕೆ ತೆರಳಿ ಮಹಿಳೆ ಕುರಿತು ಮಾಹಿತಿ ಸಂಗ್ರಹಿಸಲು ಯತ್ನಿಸಿದರು. ಆದರೆ, ಅನಿತಾ ಊರು ಬಿಟ್ಟು 10 ವರ್ಷಗಳಾಗಿವೆ ಎಂಬ ವಿಷಯ ತಿಳಿಯಿತು.

‘ಆತ್ಮಹತ್ಯೆ ಪ್ರಚೋದನೆ ಕುರಿತು ಅನಿತಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿಲ್ಲ, ಮಾರಗೌಡನಹಳ್ಳಿ ಗ್ರಾಮದಲ್ಲೂ ಇಲ್ಲ. ಅವರು ಎಲ್ಲಿ ಹೇಳಿಕೆ ನೀಡಿದರು ಎಂಬ ಮಾಹಿತಿಯೂ ಇಲ್ಲ’ ಎಂದು ಕೆರಗೋಡು ಠಾಣೆ ಎಎಸ್‌ಐ ಮಾದೇಗೌಡ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !