ಯುವತಿಯರ ಪೇಯಿಂಗ್ ಗೆಸ್ಟ್‌ ಕಟ್ಟಡಕ್ಕೆ ನುಗ್ಗಿ ಹಲ್ಲೆ

ಶನಿವಾರ, ಏಪ್ರಿಲ್ 20, 2019
28 °C
ಮದ್ಯ ಕುಡಿಯಲು ಜಾಗ ಕೊಡಲಿಲ್ಲವೆಂದು ಗಲಾಟೆ

ಯುವತಿಯರ ಪೇಯಿಂಗ್ ಗೆಸ್ಟ್‌ ಕಟ್ಟಡಕ್ಕೆ ನುಗ್ಗಿ ಹಲ್ಲೆ

Published:
Updated:

ಬೆಂಗಳೂರು: ಮಂಗಮ್ಮಪಾಳ್ಯದಲ್ಲಿರುವ ಯುವತಿಯರ ಪೇಯಿಂಗ್ ಗೆಸ್ಟ್‌ ಕಟ್ಟಡವೊಂದಕ್ಕೆ ನುಗ್ಗಿ ಗಲಾಟೆ ಮಾಡಿದ್ದ ಯುವಕರ ಗುಂಪು, ಆ ಕಟ್ಟಡದ ಮಾಲೀಕರ ಮೇಲೆ ಹಲ್ಲೆ ಮಾಡಿದೆ.

ಏಪ್ರಿಲ್ 2ರ ರಾತ್ರಿ 12ರ ಸುಮಾರಿಗೆ ನಡೆದಿರುವ ಘಟನೆ ಸಂಬಂಧ ಬಂಡೆಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಶ್ಯಗಳನ್ನು ಆಧರಿಸಿ ಯುವಕರ ತಂಡದಲ್ಲಿದ್ದ ಸಾಗರ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ತಲೆ ಮರೆಸಿಕೊಂಡಿರುವ ಆತನ ಸ್ನೇಹಿತರಿಗಾಗಿ ಹುಡುಕಾಟ ನಡೆಸಿದ್ದಾರೆ.

‘ಕಡಪಾದ ಭಾಸ್ಕರ್‌ ರೆಡ್ಡಿ ಹಾಗೂ ಅವರ ಸಹೋದರರಾದ ಜಗನ್, ಅನಿಲ್‌ಕುಮಾರ್ ಹಲವು ವರ್ಷಗಳಿಂದ ಪೇಯಿಂಗ್‌ ಗೆಸ್ಟ್ ನಡೆಸುತ್ತಿದ್ದಾರೆ. ಈ ಕಟ್ಟಡದಲ್ಲಿ 30ಕ್ಕೂ ಹೆಚ್ಚು ಯುವತಿಯರು ಉಳಿದುಕೊಂಡಿದ್ದಾರೆ. ಅದೇ ಕಟ್ಟಡಕ್ಕೆ ನುಗ್ಗಿದ್ದ ಆರೋಪಿಗಳು, ಕೃತ್ಯ ಎಸಗಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಮದ್ಯದ ಬಾಟಲಿಗಳ ಸಮೇತ ಕಟ್ಟಡದ ಬಳಿ ಹೋಗಿದ್ದ ಆರೋಪಿಗಳು, ‘ಕುಡಿಯಲು ಕಟ್ಟಡದ ಒಳಗಡೆ ಜಾಗ ಕೊಡಿ‘ ಎಂದು ಕೇಳಿದ್ದರು. ‘ಕಟ್ಟಡದಲ್ಲಿ ಯುವತಿಯರು ಇದ್ದಾರೆ. ಒಳಗೆ ಬಿಡುವುದಿಲ್ಲ. ಇಲ್ಲಿಂದ ತೆರಳಿ’ ಎಂದು ಮಾಲೀಕರು ಹೇಳಿದ್ದರು.

ಅದಕ್ಕೆ ಒಪ್ಪದ ಯುವಕರು, ‘ನಿಮ್ಮನ್ನು ಜೀವಂತ ಬಿಡುವುದಿಲ್ಲ’ ಎಂದು ಬೆದರಿಸಿ ಭಾಸ್ಕರ್‌ ರೆಡ್ಡಿ ಅವರ ಮೇಲೆ ಹಲ್ಲೆ ಮಾಡಿದ್ದರು. ಬಿಡಿಸಲು ಹೋದ ಜಗನ್ ಹಾಗೂ ಅನಿಲ್‌ಕುಮಾರ್ ಅವರಿಗೂ ದೊಣ್ಣೆಯಿಂದ ಹೊಡೆದಿದ್ದರು’ ಎಂದರು.

‘ಹಲ್ಲೆಯಿಂದ ಗಾಯಗೊಂಡ ಭಾಸ್ಕರ್‌ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ತೀವ್ರ ಗಾಯಗೊಂಡಿರುವ ಅನಿಲ್‌ಕುಮಾರ್‌ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅವರಿಬ್ಬರ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಸಾಗರ್‌ನನ್ನು ಬಂಧಿಸಲಾಗಿದೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !