ಐಟಿ ಪಾರ್ಕ್‌ಗಳಲ್ಲಿ ಮಾವು ಮಳಿಗೆ

ಬುಧವಾರ, ಜೂನ್ 26, 2019
22 °C

ಐಟಿ ಪಾರ್ಕ್‌ಗಳಲ್ಲಿ ಮಾವು ಮಳಿಗೆ

Published:
Updated:
Prajavani

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಾವು ಮೇಳ ಆಯೋಜಿಸಿ ಯಶಸ್ವಿಯಾಗಿರುವ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಮತ್ತೊಂದು ಪ್ರಯತ್ನಕ್ಕೆ ಮುಂದಾಗಿದ್ದು, ಈ ಬಾರಿ ಮಾವಿನ ಮಳಿಗೆಗಳನ್ನು ಬಹುರಾಷ್ಟ್ರೀಯ ಕಂಪನಿಗಳ ಆವರಣಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಿದೆ.

ಟೆಕಿಗಳ ಅನುಕೂಲಕ್ಕಾಗಿ ಇದನ್ನು ಮಾಡಲಾಗುತ್ತಿದ್ದು, ಈ ಸಂಬಂಧ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು ರೈತರು ಹಾಗೂ ಕಂಪನಿಗಳೊಂದಿಗೆ ಮಾತುಕತೆ ನಡೆಸಿದೆ.

ಮಂಗಳೂರಿನ ಐಟಿ ಕಂಪನಿಗಳ ಆವರಣಗಳಲ್ಲಿ ಈಗಾಗಲೇ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಕದ್ರಿ ಐಟಿ ಪಾರ್ಕ್‌ನಲ್ಲಿಯೂ ಮಳಿಗೆಗಳ ಸ್ಥಾಪನೆಗೆ ಮುಂದಾಗಿದೆ.

‘ಈ ಪ್ರಸ್ತಾವವನ್ನು ಖಾಸಗಿ ಕಂಪನಿಗಳ ಮುಂದಿಟ್ಟಿದ್ದೇವೆ. ಆವರಣದಲ್ಲಿ ರೈತರು ಮಾವು ಮಳಿಗೆಗಳನ್ನು ನಿರ್ಮಿಸಲು ಕಂಪನಿಯೊಂದು ಸಮ್ಮತಿ ಸೂಚಿಸಿದೆ. ಇದರಿಂದ ರೈತರ ಮಾವು ಮಾರಾಟಕ್ಕೆ ಉತ್ತಮ ವೇದಿಕೆ ಸಿಗಲಿದೆ’ ಎಂದು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಿ.ಜಿ.ನಾಗರಾಜು ತಿಳಿಸಿದರು.

‘ಇತ್ತೀಚೆಗೆ ಬೆಂಗಳೂರಿನ ಖೋಡೆ ಟವರ್ಸ್‌ನಲ್ಲಿ ಮಾವು ಮಳಿಗೆ ಸ್ಥಾಪಿಸಲಾಗಿದೆ. ಉತ್ತಮ ವಿಧಾನಗಳನ್ನು ಬಳಸಿ ಮಾವು ಬೆಳೆದು ಪ್ರಮಾಣ ಪತ್ರ ಪಡೆದುಕೊಂಡ ರೈತರನ್ನು ಗುರುತಿಸಲಾಗಿದ್ದು, ಐಟಿ ಕಂಪನಿಗಳಿಂದ ಮಾವು ಪೂರೈಕೆಗೆ ಬೇಡಿಕೆ ಬಂದರೆ ರೈತರೇ ಅಲ್ಲಿಗೆ  ಹೋಗಲಿದ್ದಾರೆ’ ಎಂದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !