ಶಿವರಾತ್ರಿ: ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ

ಮಂಗಳವಾರ, ಮಾರ್ಚ್ 26, 2019
31 °C

ಶಿವರಾತ್ರಿ: ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ

Published:
Updated:

ಬೆಂಗಳೂರು: ಶಿವರಾತ್ರಿ ಹಬ್ಬದ ಆಚರಣೆಗೆ ಅವಶ್ಯವಾಗಿ ಬೇಕಾದ ಹಣ್ಣು ಹಾಗೂ ಇತರ ಸಾಮಗ್ರಿಗಳ ದರ ತುಸು ಏರಿಕೆಯಾಗಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. 

ಈ ಬಾರಿ ಅವಧಿಗೂ ಮುನ್ನ ಬಿಸಿಲಿನ ತಾಪಮಾನ ಏರಿಕೆಯಾಗಿದ್ದು, ನೀರಿನ ಅಭಾವದಿಂದ ಹಣ್ಣು, ತರಕಾರಿಗಳು ನಿರೀಕ್ಷಿತ ಮಟ್ಟದಲ್ಲಿ ಮಾರುಕಟ್ಟೆಗೆ ಬಂದಿಲ್ಲ. ಇದು ಬೆಲೆ ಏರಿಕೆಗೆ ಕಾರಣವಾಗಿದೆ.

ಕೆ.ಆರ್‌.ಮಾರುಕಟ್ಟೆಯಲ್ಲಿ ಬಿಲ್ವಪತ್ರೆ ಒಂದು ಕಂತಿಗೆ ₹100 ಹಾಗೂ ಮಾವಿನ ಎಲೆಗಳ ಕಟ್ಟು ₹50ಕ್ಕೆ ಮಾರಾಟವಾಗುತ್ತಿದ್ದವು. ಅಲ್ಲದೇ, ಏಲಕ್ಕಿ ಬಾಳೆಹಣ್ಣು ಭಾನುವಾರ, ₹60 ರಿಂದ 70ಕ್ಕೆ ಮಾರಾಟವಾದರೆ, ಹಾಪ್‌ಕಾಮ್ಸ್‌ನಲ್ಲಿ ₹45 ಹಾಗೂ ಪಚ್ಚಬಾಳೆ ₹25ಕ್ಕೆ ಮಾರಾಟವಾಗುತ್ತಿತ್ತು. ಅಲ್ಲದೇ, ಸೇಬು, ಕಿತ್ತಳೆ, ಮೋಸಂಬಿ ಸೇರಿದಂತೆ ಬಹುತೇಕ ಹಣ್ಣುಗಳ ಬೆಲೆಯೂ ಏರಿಕೆ ಕಂಡಿವೆ.

‘ಸಗಟು ದರದಲ್ಲಿ, ಸೇಬು ₹65, ದ್ರಾಕ್ಷಿ ₹70, ಮೋಸಂಬಿ ₹40 ಕಿತ್ತಳೆ ₹45 ಹಾಗೂ ಕಲ್ಲಂಗಡಿ ₹8ಕ್ಕೆ ಮಾರಾಟವಾಗುತ್ತಿದೆ’ ಎಂದು ಸಿಂಗನಹಳ್ಳಿ ಅಗ್ರಹಾರದ ಎಪಿಎಂಸಿ ಹಣ್ಣುಗಳ ಮಾರುಕಟ್ಟೆ ಕಾರ್ಯದರ್ಶಿ ವಿ.ಸಿದ್ಧಾರೆಡ್ಡಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !