ಆರ್‌ಜಿಯುಎಚ್‌ಎಸ್ ಮೌಲ್ಯಮಾಪನ: ಕಾಯ್ದಿರಿಸಿದ ಆದೇಶ

7

ಆರ್‌ಜಿಯುಎಚ್‌ಎಸ್ ಮೌಲ್ಯಮಾಪನ: ಕಾಯ್ದಿರಿಸಿದ ಆದೇಶ

Published:
Updated:

ಬೆಂಗಳೂರು: ‘ಎಂಬಿಬಿಎಸ್‌ ಪದವಿ ಮತ್ತು ಸ್ನಾತಕೋತ್ತರ ಪದವಿಗಳ ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (ಆರ್‌ಜಿಯುಎಚ್‌ಎಸ್‌) ಕ್ರಮದಲ್ಲಿ ಸಾಕಷ್ಟು ನ್ಯೂನ್ಯತೆಗಳಿವೆ’ ಎಂದು ಆಕ್ಷೇಪಿಸಿ ಸಲ್ಲಿಸಲಾದ ಅರ್ಜಿಗಳ ಮೇಲಿನ ವಿಚಾರಣೆಯನ್ನು ಹೈಕೋರ್ಟ್ ಪೂರ್ಣಗೊಳಿಸಿದ್ದು ಆದೇಶ ಕಾಯ್ದಿರಿಸಿದೆ. ಈ ಕುರಿತಂತೆ ಮಂಗಳೂರಿನ ಅಮನ್‌ ಆರ್‌.ರೈ ಸೇರಿದಂತೆ ಹಲವರು ಸಲ್ಲಿಸಿರುವ ಅರ್ಜಿಗಳ ಮೇಲಿನ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಶನಿವಾರ ಪೂರ್ಣಗೊಳಿಸಿತು. ಅರ್ಜಿದಾರರ ಪರ ಹಿರಿಯ ವಕೀಲ ವಿ.ಲಕ್ಷ್ಮೀನಾರಾಯಣ, ಡಿ.ಆರ್.ರವಿಶಂಕರ್ ಮತ್ತು ಅಭಿಷೇಕ್ ಮಾಲಿ ಪಾಟೀಲ ಹಾಗೂ ಆರ್‌ಜಿಯುಎಚ್‌ಎಸ್‌ ಪರವಾಗಿ ಎನ್‌.ಕೆ.ರಮೇಶ್‌ ಮತ್ತು ಮೌಲ್ಯಮಾಪನ ಕುಲಸಚಿವ ಡಾ.ಎಂ.ಕೆ.ರಮೇಶ್ ವಾದ ಮಂಡಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !