ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಶೂಟರ್‌ಗಳಿಗೆ ನಿರಾಸೆ

Last Updated 9 ಜೂನ್ 2018, 19:30 IST
ಅಕ್ಷರ ಗಾತ್ರ

ಶಿಗ್ವಿ, ಮಾಲ್ಟ: ಭಾರತದ ಶೂಟರ್‌ಗಳು ಐಎಸ್‌ಎಸ್‌ಎಫ್‌ ಶಾಟ್‌ಗನ್‌ ಸ್ಕೀಟ್ ವಿಶ್ವಕಪ್‌ನಲ್ಲಿ ಶನಿವಾರ ನಿರಾಸೆ ಅನುಭವಿಸಿದರು. ಮಹಿಳೆಯರ ವಿಭಾಗದಲ್ಲಿ ಭರವಸೆ ಮೂಡಿಸಿದ್ದ ಗಾನೆಮತ್ ಶೇಖಾನ್‌ ಮತ್ತು ಪರಿಣಜ್‌ ಧಲಿವಾಲ್‌ ಅವರು ಕ್ರಮವಾಗಿ 39 ಮತ್ತು 57ನೇ ಸ್ಥಾನ ಗಳಿಸಿದರು.

ಅರ್ಹತಾ ಸುತ್ತಿನಲ್ಲಿ ಗಾನೆಮತ್‌ 125ರ ಪೈಕಿ 96 ಪಾಯಿಂಟ್‌ ಗೆದ್ದರು. ಪರಿಣಜ್‌ಗೆ ಕೇವಲ 73 ಪಾಯಿಂಟ್ ಗಳಿಸಲಷ್ಟೇ ಸಾಧ್ಯವಾಯಿತು. ಚಿನ್ನ ಗೆದ್ದ ಬ್ರಿಟನ್‌ನ ಆಂಬರ್‌ ಹಿಲ್ ಅವರಿಗೂ ನಿರೀಕ್ಷೆಗೆ ತಕ್ಕ ಸಾಮರ್ಥ್ಯ ತೋರಲು ಆಗಲಿಲ್ಲ. ಅವರು 112 ಪಾಯಿಂಟ್‌ ಗಳಿಸಿದರು.

ಪುರುಷರ ಸ್ಕೀಟ್‌ನಲ್ಲಿ ಅನಂತ್‌ ಜೀತ್ ಸಿಂಗ್‌ ನರುಕಾ, ಗುರಿಹಾಳ್ ಸಿಂಗ್‌ ಗರ್ಚಾ ಮತ್ತು ಆಯುಷ್‌ ರುದ್ರರಾಜು ನಿರಾಸೆ ಕಂಡರು. ಅವರು ಕ್ರಮವಾಗಿ 53, 87 ಮತ್ತು 94ನೇ ಸ್ಥಾನ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT