ಭಾನುವಾರ, ಸೆಪ್ಟೆಂಬರ್ 20, 2020
23 °C

ಐಪಿಎಲ್‌ ಪಂದ್ಯ: ‘ನಮ್ಮ ಮೆಟ್ರೊ’ ಅವಧಿ ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಕ್ರಿಕೆಟ್‌ ಪಂದ್ಯಗಳು ನಡೆಯುವ ದಿನಗಳಲ್ಲಿ ‘ನಮ್ಮ ಮೆಟ್ರೊ ಸೇವೆಯ ಅವಧಿಯನ್ನು ರಾತ್ರಿ 12.30ರವರೆಗೆ ವಿಸ್ತರಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ನಿರ್ಧರಿಸಿದೆ.

ಮಾರ್ಚ್‌ 28, ಏಪ್ರಿಲ್‌ 5, 21, 24 ಹಾಗೂ 30, ಮೇ 4ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳು ರಾತ್ರಿ ವೇಳೆ ನಡೆಯಲಿವೆ. ಈ ದಿನಗಳಲ್ಲಿ ನಾಗಸಂದ್ರ, ಯಲಚೇನಹಳ್ಳಿ, ಮೈಸೂರು ರಸ್ತೆ ಹಾಗೂ ಬೈಯಪ್ಪನಹಳ್ಳಿ ನಿಲ್ದಾಣಗಳಲ್ಲಿ ದಿನದ ಕೊನೆಯ ರೈಲು ರಾತ್ರಿ 12.30ಕ್ಕೆ ಹೊರಡಲಿದೆ. ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ಮೆಟ್ರೊ ನಿಲ್ದಾಣದಲ್ಲಿ ದಿನದ ಕೊನೆಯ ರೈಲು ರಾತ್ರಿ 1 ಗಂಟೆಗೆ ಹೊರಡಲಿದೆ.

ಕಬ್ಬನ್ ನಿಲ್ದಾಣದಲ್ಲಿ ಜನಜಂಗುಳಿ ತಪ್ಪಿಸುವ ಉದ್ದೇಶಕ್ಕೆ ₹ 50ರ ಪೇಪರ್ ಟಿಕೆಟ್‌ ವ್ಯವಸ್ಥೆ ಮಾಡಲಾಗಿದೆ. ಪಂದ್ಯ ವೀಕ್ಷಿಸಲು ಬರುವ ಪ್ರೇಕ್ಷಕರು ಕಬ್ಬನ್ ಉದ್ಯಾನ ನಿಲ್ದಾಣದಿಂದ ಮರುಪ್ರಯಾಣ ಕೈಗೊಳ್ಳಲು ಇದರಿಂದ ಅನುಕೂಲ ಆಗಲಿದೆ. ಪಂದ್ಯಗಳು ನಡೆಯುವ ಈ ದಿನಗಳಲ್ಲಿ ರಾತ್ರಿ 7 ಗಂಟೆ ಬಳಿಕ ಎಲ್ಲ ಮೆಟ್ರೊ ನಿಲ್ದಾಣಗಳಲ್ಲೂ ಪೇಪರ್‌ ಟಿಕೆಟ್‌ ಲಭ್ಯ.

ಏಪ್ರಿಲ್‌ 7ರಂದು ಐಪಿಎಲ್‌ ಪಂದ್ಯ ಸಂಜೆ ನಡೆಯಲಿದೆ. ಅಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ಪೇಪರ್‌ ಟಿಕೆಟ್‌ ಮಾರಾಟ ಮಾಡಲಾಗುತ್ತದೆ. ಕಬ್ಬನ್‌ ಉದ್ಯಾನ ನಿಲ್ದಾಣದಿಂದ ಬೇರೆ ನಿಲ್ದಾಣಗಳಿಗೆ ಪ್ರಯಾಣಿಸಲು ರಾತ್ರಿ 7ರ ಬಳಿಕ ಪೇಪರ್‌ ಟಿಕೆಟ್ ಬಳಸಬಹುದು. 

ಸ್ಮಾರ್ಟ್‌ಕಾರ್ಡ್‌ ಬಳಸುವ ಪ್ರಯಾಣಿಕರು ಎಂದಿನಂತೆಯೇ ಪ್ರಯಾಣಿಸಬಹುದು ಎಂದು ನಿಗಮದ ಪ್ರಕಟಣೆ ತಿಳಿಸಿದೆ. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು