ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಸಜ್ಜಿತ ಹೊಸ ಬಸ್ ಬೇಕು

Last Updated 3 ಮಾರ್ಚ್ 2019, 13:10 IST
ಅಕ್ಷರ ಗಾತ್ರ

ರಾಜಾಜಿನಗರದ ಮೊದಲನೇ ಬ್ಲಾಕ್‌ನಿಂದ ಹಲಸೂರು ನಡುವೆ ಬೆಳಿಗ್ಗೆ 8.50 ರಿಂದ ಸಂಜೆಯವರೆಗೆ ಬಸ್‌ ಸಂಚರಿಸುತ್ತದೆ. ಇದರ ರೂಟ್‌ ಸಂಖ್ಯೆ 315. ಈ ಮಾರ್ಗದಲ್ಲಿ ಬರುವ ಶಾಲೆ, ಕಾಲೇಜು, ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಕಚೇರಿಗೆ ತೆರಳುವ ವಿದ್ಯಾರ್ಥಿಗಳು, ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ನಿತ್ಯ ಈ ಬಸ್‌ನಲ್ಲಿ ಪ್ರಯಾಣಿಸುವರು.

ಈ ಮಾರ್ಗದಲ್ಲಿ ಓಡಿಸುತ್ತಿರುವ ಬಸ್ ತೀರಾ ಹಳೆಯದಾಗಿದ್ದು ಅದರ ಕೆಳಭಾಗದಲ್ಲಿ ಅಳವಡಿಸಿರುವ ಕಬ್ಬಿನ ಪಟ್ಟಿಗಳು ಕಿತ್ತುಹೋಗಿವೆ. ಇದು ನಿಂತು ಪಯಣಿಸುವ ಪ್ರಯಾಣಿಕರಿಗೆ ಅನಾನುಕೂಲಕರವಾಗಿ ಪರಿಣಮಿಸಿದೆ.

ಈ ಮಾರ್ಗದಲ್ಲಿ ಪ್ರಯಾಣಿಸುವವರು ಸುರಕ್ಷಿತವಾಗಿ ಸಂಚರಿಸಲು ಅನುಕೂಲವಾಗುವಂತೆ ಸುಸಜ್ಜಿತ ಹೊಸ ಬಸ್ ಒದಗಿಸಲು ಬಿಎಂಟಿಸಿ ಅಧಿಕಾರಿಗಳು ಮನಸ್ಸು ಮಾಡಬೇಕು ಎಂದು ಪ್ರಯಾಣಿಕರಾದ ನಾವು ಕೋರುತ್ತೇನೆ.

-ನಿರೀಕ್ಷೆಯಲ್ಲಿ ಪ್ರಯಾಣಿಕರಾದಬಸವರಾಜ ಹುಡೇದಗಡ್ಡಿ, ಭಾಸ್ಕರ್‌, ಜಯಮ್ಮ, ಶಶಿಕಲಾ, ಅರವಿಂದ, ಶೇಖರ, ಆನಂದಕುಮಾರ, ರಾಜಾಜಿನಗರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT