ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಮೆಟ್ರೊ: ಎಂಜಿ.ರಸ್ತೆ ನಿಲ್ದಾಣದದಲ್ಲಿ ತಾಂತ್ರಿಕ ದೋಷ, 4 ಟ್ರಿಪ್‌ ರದ್ದು

Last Updated 29 ಜನವರಿ 2019, 20:05 IST
ಅಕ್ಷರ ಗಾತ್ರ

ಬೆಂಗಳೂರು: ಎಂ.ಜಿ.ರಸ್ತೆ ಮೆಟ್ರೊ ನಿಲ್ದಾಣದ ಸಿಗ್ನಲಿಂಗ್‌ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದರಿಂದ ನಮ್ಮ ಮೆಟ್ರೊ ಸೇವೆಯಲ್ಲಿ ಮಂಗಳವಾರ ವ್ಯತ್ಯಯ ಉಂಟಾಯಿತು.

ಬೆಳಿಗ್ಗೆ 11.24ರಿಂದ 12.25ರ ನಡುವೆ ನೇರಳೆ ಮಾರ್ಗದಲ್ಲಿ ಒಟ್ಟು ನಾಲ್ಕು ಟ್ರಿಪ್‌ಗಳನ್ನು ರದ್ದುಪಡಿಸಬೇಕಾಯಿತು. ಹೀಗಾಗಿ ಪ್ರಯಾಣಿಕರು ತೊಂದರೆ ಅನುಭವಿಸಿದರು.

ಎಂ.ಜಿ.ರೋಡ್‌ ಸಿಗ್ನಲಿಂಗ್‌ ವ್ಯವಸ್ಥೆಯಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ಮೆಟ್ರೊ ರೈಲುಗಳನ್ನು ಸ್ವಯಂಚಾಲಿತ ಮೋಡ್‌ ಬದಲು ಮ್ಯಾನುವಲ್‌ ಮೋಡ್‌ನಲ್ಲಿ ಓಡಿಸಬೇಕಾಯಿತು. ಈ ಅವಧಿಯಲ್ಲಿ ರೈಲುಗಳು ಎಂದಿಗಿಂತ ಕಡಿಮೆ ವೇಗದಲ್ಲಿ ಸಂಚರಿಸಿದವು. ಹಾಗಾಗಿ ಪ್ರಯಾಣಿಕರು ತಲುಪಬೇಕಾದ ನಿಲ್ದಾಣವನ್ನು ಸೇರುವಾಗಲೂ ವಿಳಂಬವಾಯಿತು.

‘ರೈಲುಗಳನ್ನು ನಿರ್ಬಂಧಿತ ವೇಗದಲ್ಲಿ ಸಂಚರಿಸಬೇಕಾಗಿ ಬಂದಿದ್ದರಿಂದ ನಾಲ್ಕು ಟ್ರಿಪ್‌ ಕಡಿತಗೊಳಿಸಿದೆವು. ಪ್ರಯಾಣಿಕರಿಗೆ ತೊಂದರೆ ಆಗಿದ್ದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇವೆ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ಸಿಪಿಆರ್‌ಒ ಬಿ.ಎಲ್‌.ಯಶವಂತ ಚೌಹಾಣ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT