ರೇವಣ್ಣ ನಿವೃತ್ತಿಗೆ ತಯಾರಾಗಲಿ: ಬಿಎಸ್‌ವೈ

ಶನಿವಾರ, ಏಪ್ರಿಲ್ 20, 2019
28 °C

ರೇವಣ್ಣ ನಿವೃತ್ತಿಗೆ ತಯಾರಾಗಲಿ: ಬಿಎಸ್‌ವೈ

Published:
Updated:
Prajavani

ಹುಬ್ಬಳ್ಳಿ: ‘ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗುವುದು ಖಚಿತವಾಗಿದ್ದು, ಸಚಿವ ಎಚ್‌.ಡಿ. ರೇವಣ್ಣ ರಾಜಕೀಯ ನಿವೃತ್ತಿಗೆ ಸಿದ್ಧರಾಗಲಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿರುಗೇಟು ನೀಡಿದರು.

ಹುಬ್ಬಳ್ಳಿಯ ಗಾಮನಗಟ್ಟಿ ಗ್ರಾಮದಲ್ಲಿ ಗುರುವಾರ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿಕೆ ನೀಡಿರುವ ರೇವಣ್ಣ, ಜನರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ರಾಜೀನಾಮೆ ಪತ್ರವನ್ನು ಈಗಲೇ ಬರೆದಿಟ್ಟುಕೊಳ್ಳಲಿ’ ಎಂದರು.

‘ಮೊದಲು ಅಪ್ಪ– ಮಕ್ಕಳ ಕಾಟ ಇತ್ತು, ಈಗ ಮೊಮ್ಮಕ್ಕಳ ಕಾಟ ಸಹ ಶುರುವಾಗಿದೆ. ರಾಹುಲ್ ಗಾಂಧಿ ಪ್ರಧಾನಿಯಾಗುತ್ತಾರೆ ಎಂದು ದೇವೇಗೌಡರು ತಿರುಕನ ಕನಸು ಕಾಣುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !