ಶಾಸಕ ಗಣೇಶ್‌ಗೆ ಜಾಮೀನು ನಿರಾಕರಣೆ

ಗುರುವಾರ , ಏಪ್ರಿಲ್ 25, 2019
33 °C
ಆನಂದ್‌ ಸಿಂಗ್‌ ಮೇಲೆ ಹಲ್ಲೆ ಆರೋಪ

ಶಾಸಕ ಗಣೇಶ್‌ಗೆ ಜಾಮೀನು ನಿರಾಕರಣೆ

Published:
Updated:

ಬೆಂಗಳೂರು: ಬಳ್ಳಾರಿ ಜಿಲ್ಲೆ ವಿಜಯನಗರದ ಶಾಸಕ ಆನಂದ್‌ಸಿಂಗ್‌ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಕ್ಕೆ ಒಳಗಾಗಿರುವ ಕಂಪ್ಲಿ ಶಾಸಕ ಜಿ.ಎನ್‌. ಗಣೇಶ್‌ ಅವರಿಗೆ ಇಲ್ಲಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ನಿರಾಕರಿಸಿದೆ.

ಗಣೇಶ್‌ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಶಾಸಕರು ಹಾಗೂ ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣಾ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರ ಅವರು ಜಾಮೀನು ನಿರಾಕರಿಸಿದರು.

‘ಹಲ್ಲೆ ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿರುವಾಗ ಜಾಮೀನು ಪಡೆಯಲು ಆರೋಪಿ ಅರ್ಹರಾಗಿರುವುದಿಲ್ಲ’ ಎಂದು ಅವರು ತಮ್ಮ ಸುದೀರ್ಘ ಆದೇಶದಲ್ಲಿ ತಿಳಿಸಿದ್ದಾರೆ.

ಬಿಜೆಪಿಯವರ ‘ಆಪರೇಷನ್‌ ಕಮಲ’ ಪ್ರಯತ್ನವನ್ನು ವಿಫಲಗೊಳಿಸುವ ಉದ್ದೇಶದಿಂದ ಕಾಂಗ್ರೆಸ್‌ ಶಾಸಕರನ್ನು ಜನವರಿ 18ರಿಂದ ಕೆಲವು ದಿನ ಬಿಡದಿ ಸಮೀಪದ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಇಡಲಾಗಿತ್ತು.  20 ರಂದು ಬೆಳಗಿನ ಜಾವ ಗಣೇಶ್‌ ಹಾಗೂ ಆನಂದ್‌ಸಿಂಗ್‌ ಅವರ ನಡುವೆ ಮಾರಾಮಾರಿ ನಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಸಿಂಗ್‌ ಅವರನ್ನು ನಗರದ  ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆನಂತರ ಪರಾರಿಯಾಗಿದ್ದ ಗಣೇಶ್‌ ಅವರನ್ನು ತಿಂಗಳ ಬಳಿಕ ಗುಜರಾತಿನ ಸೋಮನಾಥ ಪಟ್ಟಣದಲ್ಲಿ ಬಂಧಿಸಲಾಗಿತ್ತು. 

Tags: 

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !