ಆತ್ಮಹತ್ಯೆ ಯತ್ನದ ಆರೋಪ: ಶಾಸಕ ಎಸ್‌.ಎ. ರಾಮದಾಸ್‌ ಖುಲಾಸೆ

ಶುಕ್ರವಾರ, ಏಪ್ರಿಲ್ 26, 2019
21 °C

ಆತ್ಮಹತ್ಯೆ ಯತ್ನದ ಆರೋಪ: ಶಾಸಕ ಎಸ್‌.ಎ. ರಾಮದಾಸ್‌ ಖುಲಾಸೆ

Published:
Updated:

ಬೆಂಗಳೂರು: ‘ವೈದ್ಯರ ವರದಿ ಪ್ರಕಾರ, ಆರೋಪಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷಿ ಇಲ್ಲ’ ಎಂಬ ಕಾರಣಕ್ಕೆ ಬಿಜೆಪಿ ಶಾಸಕ ಎಸ್‌.ಎ.ರಾಮದಾಸ್‌ ಅವರನ್ನು ಜನಪ್ರತಿನಿಧಿಗಳ ನ್ಯಾಯಾಲಯ, ಆತ್ಮಹತ್ಯೆ ಪ್ರಯತ್ನದ ಆರೋಪದಿಂದ ಖುಲಾಸೆಗೊಳಿಸಿದೆ.

ಈ ಕುರಿತ ಪ್ರಕರಣವನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ’ ಸೋಮವಾರ ವಿಲೇವಾರಿ ಮಾಡಿದೆ.

‘ವೈದ್ಯರು ಕೋರ್ಟ್‌ನಲ್ಲಿ ನುಡಿದ ಸಾಕ್ಷಿಯಲ್ಲಿ, ಆರೋಪಿಯು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಅಂತೆಯೇ ವೈದ್ಯರ ವರದಿ ಹೊರತಾದ ಸಾಕ್ಷ್ಯಗಳೂ ಈ ಪ್ರಕರಣದಲ್ಲಿ ಲಭ್ಯವಿಲ್ಲ. ಆದ್ದರಿಂದ ರಾಮದಾಸ್ ಅವರನ್ನು ಆರೋಪಮುಕ್ತಗೊಳಿಸಲಾಗಿದೆ’ ಎಂದು ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ ಅವರು ಆದೇಶಿಸಿದ್ದಾರೆ.

‘ರಾಮದಾಸ್‌ ಅವರು ಮೈಸೂರಿನ ಶ್ರೀರಾಮಪುರದ ಎಸ್‌ಬಿಎಂ ಕಾಲೊನಿಯ ಮನೆಯಲ್ಲಿ 2014ರ ಫೆಬ್ರುವರಿ 2ರಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕುವೆಂಪುನಗರ ಪೊಲೀಸ್‌ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ 309ರ ಅನುಸಾರ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿತ್ತು.

ಪರಿವರ್ತನೆಗೆ ದಾರಿ: ಕೋರ್ಟ್‌ ತೀರ್ಪಿಗೆ ಸಂಬಂಧಿಸಿದಂತೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ರಾಮದಾಸ್‌ ಅವರು, ‘ಮನುಷ್ಯನ ಜೀವನದಲ್ಲಿ ಆಕಸ್ಮಿಕ ಘಟನೆಗಳು ಸಂಭವಿಸುತ್ತವೆ. ಅವು ನಮ್ಮನ್ನು ಅಂದುಕೊಂಡ ದಿಕ್ಕಿಗಿಂತಲೂ ಬೇರೆಯೇ ದಿಕ್ಕಿಗೆ ಕರೆದುಕೊಂಡು ಹೋಗುತ್ತವೆ. ಪರಿವರ್ತೆನೆಗೂ ಎಡೆಮಾಡಿಕೊಡುತ್ತವೆ’ ಎಂದು ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !