ಶನಿವಾರ, ಜುಲೈ 24, 2021
21 °C

ಮಂಡ್ಯ: ಶೌಚಾಲಯ ಸ್ವಚ್ಛ ಮಾಡಿದ ಶಾಸಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಶಾಸಕ ಎಂ.ಶ್ರೀನಿವಾಸ್‌ ಶನಿವಾರ ತಾಲ್ಲೂಕಿನ ಹನಕೆರೆ ಗ್ರಾಮದ ವಿವೇಕ ವಿದ್ಯಾಸಂಸ್ಥೆಯ ಶೌಚಾಲಯ ಸ್ವಚ್ಛಗೊಳಿಸಿ ಅಚ್ಚರಿ ಮೂಡಿಸಿದರು.

ಹನಕೆರೆ, ಶ್ರೀನಿವಾಸ್ ಅವರ ಹುಟ್ಟೂರಾಗಿದ್ದು ಹಲವು ವರ್ಷಗಳಿಂದ ವಿವೇಕ ವಿದ್ಯಾಸಂಸ್ಥೆ ನಡೆಸುತ್ತಿದ್ದಾರೆ. ಶನಿವಾರ ಶಾಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಶೌಚಾಲಯದಲ್ಲಿ ಸ್ವಚ್ಛತೆಯ ಕೊರತೆ ಗಮನಿಸಿದರು. ಸಿಬ್ಬಂದಿ ವಿರುದ್ಧ ಕೋಪಗೊಂಡ ಅವರು ತಾವೇ ಪೊರಕೆ ಹಿಡಿದು ಶೌಚಾಲಯ ಸ್ವಚ್ಛಗೊಳಿಸಿದರು. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

‘ವಿವೇಕ ವಿದ್ಯಾಸಂಸ್ಥೆ ನನ್ನ ಕನಸಿನ ಕೂಸು. ಆವರಣ, ತಗರತಿ, ಶೌಚಾಲಯ ಎಲ್ಲವೂ ಸ್ವಚ್ಛವಾಗರಬೇಕು. ಎಷ್ಟು ಬಾರಿ ಹೇಳಿದರೂ ಕಾರ್ಮಿಕರು ಸರಿಯಾಗಿ ಸ್ವಚ್ಛ ಮಾಡುತ್ತಿರಲಿಲ್ಲ. ಹೀಗಾಗಿ ನಾನೇ ಶೌಚಾಲಯ ಸ್ವಚ್ಛ ಮಾಡಿದೆ’ ಎಂದು ಶಾಸಕ ಎಂ.ಶ್ರೀನಿವಾಸ್‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು