ಪ್ರಧಾನಿ ಮೋದಿ ಉದ್ಯಮಿಗಳ ಚೌಕಿದಾರ: ಕೃಷ್ಣ ಬೈರೇಗೌಡ

ಶನಿವಾರ, ಏಪ್ರಿಲ್ 20, 2019
31 °C

ಪ್ರಧಾನಿ ಮೋದಿ ಉದ್ಯಮಿಗಳ ಚೌಕಿದಾರ: ಕೃಷ್ಣ ಬೈರೇಗೌಡ

Published:
Updated:

ರಾಜರಾಜೇಶ್ವರಿನಗರ: ‘ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೆಸರಾಂತ 47 ಉದ್ಯಮಿಗಳ ಹಿತಕಾಯುವ ಚೌಕಿದಾರ’ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೃಷ್ಣ ಬೈರೇಗೌಡ ಆರೋಪಿಸಿದರು. 

ಚುನಾವಣಾ ಪ್ರಚಾರದ ವೇಳೆ ಇಲ್ಲಿನ ಮಾರಮ್ಮನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

‘ದೇಶವನ್ನು ಕೊಳ್ಳೆ ಹೊಡೆದು ವಿದೇಶಕ್ಕೆ ಹೋದವರ ಪರವಾಗಿ ನಿಂತಿರುವುದೇ ಮೋದಿ ಅವರ ಸಾಧನೆ. ಐದು ವರ್ಷಗಳಲ್ಲಿ ರೈತರ ಕಷ್ಟಗಳನ್ನು ಪರಿಹರಿಸದೆ, ಉದ್ಯಮಿಗಳ ಕೋಟ್ಯಾಂತರ ರೂಪಾಯಿ ಸಾಲಗಳನ್ನು ಮನ್ನಾ ಮಾಡಿದ್ದಾರೆ. ಇಂಧನ ಬೆಲೆಗಳ ಏರಿಕೆಗೆ ಕಾರಣವಾದ ಅವರು ಮತ್ತೊಮ್ಮೆ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳಿ’ ಎಂದರು. 

‘ಡಿ.ವಿ.ಸದಾನಂದಗೌಡ ಅವರು ಯಾವುದೇ ಅಭಿವೃದ್ಧಿ ಮಾಡದೆ, ‘ಮೋದಿ ಮುಖ ನೋಡಿ ಮತ ನೀಡಿ’, ‘ದೇಶಕ್ಕೆ ರಕ್ಷಣೆ ಬೇಕು’ ಎನ್ನುತ್ತಾರೆ. ಸೈನಿಕರ ಹೆಸರಿನಲ್ಲಿ ರಾಜಕೀಯ ಮಾಡುವ, ಅಭಿವೃದ್ಧಿ ಕೆಲಸ ಮಾಡದ ಬಿಜೆಪಿ ಅಭ್ಯರ್ಥಿಯನ್ನು ಮನೆಗೆ ಕಳುಹಿಸಿ’ ಎಂದು ಮನವಿ ಮಾಡಿದರು. 

ಶಾಸಕ ಎಸ್.ಟಿ.ಸೋಮಶೇಖರ್,‘ಸದಾನಂದಗೌಡ ನಯಾ ಪೈಸೆ ಕೆಲಸ ಮಾಡಿಲ್ಲ. ಅವರನ್ನು ಸೋಲಿಸಿ ವಿಚಾರವಂತ, ಬಡವರ ಜೊತೆಯಲ್ಲಿ ನಿತ್ಯ ಬೆರೆಯುವ ಕೃಷ್ಣ ಬೈರೇಗೌಡರಿಗೆ ಮತನೀಡಿ ಎಂದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !