ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಅಭಿವೃದ್ಧಿಯ ಪಾಲುದಾರ ಮೋದಿ: ಸಿ.ಟಿ.ರವಿ

Last Updated 20 ಅಕ್ಟೋಬರ್ 2018, 19:58 IST
ಅಕ್ಷರ ಗಾತ್ರ

ಬೆಂಗಳೂರು: ‘ಹಣ, ಜಾತಿ, ಕುಟುಂಬದ ರಾಜಕೀಯ ಹಿನ್ನೆಲೆಯುಳ್ಳ ಕೆಲವರು ಈ ಹಿಂದೆ ಪ್ರಧಾನಿಯಾಗಿದ್ದಾರೆ. ಆದರೆ, ತಮ್ಮ ಶ್ರಮದಿಂದ ಪ್ರಧಾನಿ ಹುದ್ದೇಗೇರಿದವರು ನರೇಂದ್ರ ಮೋದಿ’ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

ರಾಷ್ಟ್ರಧರ್ಮ ಸಂಘಟನೆ ಆಯೋಜಿಸಿದ್ದ ‘ಮೋದಿ‌ ಮತ್ತೊಮ್ಮೆ’ ಆಡಿಯೊ ಮತ್ತು ವಿಡಿಯೊ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಮೋದಿ ದೇಶದ ಅಭಿವೃದ್ಧಿಯ ಪಾಲುದಾರರು. ಭಾರತವನ್ನು ಜಗತ್ತಿಗೆ ಪರಿಚಯಿಸಿದವರು’ ಎಂದರು.

‘ಅದೃಷ್ಟದ ಮೂಲಕ ಅಧಿಕಾರಕ್ಕೆ ಏರಿದರು ಮನಮೋಹನ್ ಸಿಂಗ್. ಆದರೆ, ಆಡಳಿತ ನಡೆಸಿದ್ದು ಮಾತ್ರ ಸೋನಿಯಾ ಗಾಂಧಿ. ಸಚಿವ ಸಂಪುಟಕ್ಕೆ ಕಿಮ್ಮತ್ತು ನೀಡದಂತಹ ಸ್ಥಿತಿ ಮನಮೋಹನ್ ಸಿಂಗ್ ಅವರ ಕಾಲದಲ್ಲಿತ್ತು. ಆದರೆ, ಸಂಪುಟವನ್ನು ಪ್ರಜಾಪ್ರಭುತ್ವದ ದೇಗುಲ ಎಂದು ಕರೆದವರು ಮೋದಿ’ ಎಂದು ಹೇಳಿದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ದೇವೇಗೌಡರು ‘ಅವರೊಬ್ಬ ನೀಚ ಮುಖ್ಯಮಂತ್ರಿ’ ಎಂದಿದ್ದರು. ಈಗ ಒಂದೇ ವೇದಿಕೆಯಲ್ಲಿದ್ದಾರೆ’ ಎಂದು ವ್ಯಂಗ್ಯಮಾಡಿದರು.

ನಟ ಪ್ರಕಾಶ್ ಬೆಳವಾಡಿ, ‘ಪ್ರಾಮಾಣಿಕವಾಗಿ ಕೆಲಸ ಮಾಡುವ ವ್ಯಕ್ತಿ ಮೋದಿ. ಅವರ ಘನತೆ ಕಾಪಾಡುವ ಹೊಣೆ ಇಲ್ಲಿನ ಕಾರ್ಯಕರ್ತರ ಮೇಲಿದೆ. ಮೋದಿ ಕುರಿತು ಅಸಭ್ಯವಾಗಿ ಮಾತನಾಡುವವರ ವಿರುದ್ಧ ಯಾರೂ ಮಾತನಾಡಬಾರದು’ ಎಂದು ಸಲಹೆ ನೀಡಿದರು.

ಪ್ರಧಾನಿ ಮೋದಿ ಸರ್ಕಾರದ ನಾಲ್ಕು ವರ್ಷಗಳ ಸಾಧನೆಯ ವಿವರಯುಳ್ಳ ‘ಮೋದಿ ಮತ್ತೊಮ್ಮೆ’ ಹಾಡನ್ನು ಚೇತನ್ ಮಂಜುನಾಥ್ ನಿರ್ದೇಶಿಸಿದ್ದಾರೆ. ಚಹಾದೊಂದಿಗೆ ಚರ್ಚೆ ವಾಹನಕ್ಕೆ ಚಾಲನೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT