ಮಂಗಳವಾರ, ನವೆಂಬರ್ 12, 2019
19 °C

ಸ್ನಾನದ ಕೋಣೆಯಲ್ಲಿ ಇಣುಕಿ ಮಾಂಗಲ್ಯ ಕದ್ದಿದ್ದವನ ಬಂಧನ

Published:
Updated:

ಬೆಂಗಳೂರು: ಮಹಿಳೆ ಸ್ನಾನ ಮಾಡುತ್ತಿದ್ದ ಕೋಣೆಯ ಕಿಟಕಿಯಲ್ಲಿ ಇಣುಕಿ ಮಾಂಗಲ್ಯ ಸರ ಕದ್ದಿದ್ದ ರಮೇಶ್  ಎಂಬಾತನನ್ನು ಪರಪ್ಪನ ಅಗ್ರಹಾರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ‘ಬಂಧಿತ ರಾಯಸಂದ್ರದ ನಿವಾಸಿ, ಆಟೊ ಚಾಲಕ. 42 ವರ್ಷದ ಮಹಿಳೆ ನೀಡಿದ್ದ ದೂರಿನಡಿ ಆತನ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಇದೇ 12ರಂದು ಕೃತ್ಯ ನಡೆದಿತ್ತು. ಸ್ನಾನ ಮಾಡುವಾಗ ಆರೋಪಿ ಕಿಟಕಿಯಲ್ಲಿ ಇಣುಕಿ ನೋಡುತ್ತಿದ್ದ. ಅದನ್ನು ಗಮನಿಸಿದ್ದ ಮಹಿಳೆ ಕಿರುಚಾಡಿದ್ದರು. ನೆರವಿಗೆ ಬಂದಿದ್ದ ಅಕ್ಕ–ಪಕ್ಕದ ಮನೆಯವರು, ಆರೋಪಿಯನ್ನು ಹಿಡಿದು ಥಳಿಸಿದ್ದರು.’‌

‘ಆಗ ಆರೋಪಿ, ತಾನು ಎರಡನೇ ಬಾರಿ ಬಂದಿದ್ದೇನೆ. ಕಳೆದ ಬಾರಿ ಬಂದಾಗ ಮಾಂಗಲ್ಯ ಸರ ಕದ್ದುಕೊಂಡು ಹೋಗಿದ್ದಾಗಿ ತಪ್ಪೊಪ್ಪಿಕೊಂಡಿದ್ದ. ನಿವಾಸಿಗಳು ಆತನನ್ನು ಠಾಣೆಗೆ ಒಪ್ಪಿಸಿದ್ದಾರೆ. ಸರ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು. 

ಪ್ರತಿಕ್ರಿಯಿಸಿ (+)