ಮಹಡಿಯಿಂದ ಬಿದ್ದು ತಾಯಿ– ಮಗ ಸಾವು

ಬುಧವಾರ, ಜೂಲೈ 17, 2019
27 °C
ವೈಟ್ ಹೌಸ್ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ದುರ್ಘಟನೆ

ಮಹಡಿಯಿಂದ ಬಿದ್ದು ತಾಯಿ– ಮಗ ಸಾವು

Published:
Updated:
Prajavani

ಬೆಂಗಳೂರು: ಆರ್‌.ಟಿ.ನಗರ ಬಳಿಯ ವೈಟ್ ಹೌಸ್ ಅಪಾರ್ಟ್‌ಮೆಂಟ್‌ ಸಮುಚ್ಚಯದ ಮಹಡಿಯಿಂದ ಬಿದ್ದು ಭಾವನಾ (29) ಹಾಗೂ ಅವರ ಮಗ ದೇವಂತ್ (2) ಮೃತಪಟ್ಟಿದ್ದಾರೆ.

ಮಂಗಳವಾರ ಮಧ್ಯಾಹ್ನ 3.30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಆ ಸಂಬಂಧ ಆರ್‌.ಟಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಅಪಾರ್ಟ್‌ಮೆಂಟ್‌ ಸಮುಚ್ಚಯದ ಏಳನೇ ಮಹಡಿಯಿಂದ ತಾಯಿ ಹಾಗೂ ಮಗ, ಒಟ್ಟಿಗೆ ಕೆಳಗೆ ಬಿದ್ದಿದ್ದರು. ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ದೇವಂತ್ ಸ್ಥಳದಲ್ಲೇ ಮೃತಪಟ್ಟ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.

‘ತೀವ್ರ ಗಾಯಗೊಂಡು ನರಳಾಡುತ್ತಿದ್ದ ಭಾವನಾ ಅವರನ್ನು ಸ್ಥಳೀಯ ನಿವಾಸಿಗಳೇ ಸಮೀಪದ ಬ್ಯಾಪ್ಟಿಸ್‌ ಆಸ್ಪತ್ರೆಗೆ ಕರೆದೊಯ್ದಿದ್ದರು. ಮಾರ್ಗ ಮಧ್ಯೆಯೇ ಅವರು ಮೃತಪಟ್ಟಿರುವುದಾಗಿ ಅಲ್ಲಿಯ ವೈದ್ಯರು ಹೇಳಿದರು’ ಎಂದು ವಿವರಿಸಿದರು.

ಕಾರಣ ಗೊತ್ತಾಗಿಲ್ಲ: ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಆರ್‌.ಟಿ.ನಗರ ಪೊಲೀಸರು, ಭಾವನಾ ಅವರು ವಾಸ
ವಿದ್ದ ಫ್ಲ್ಯಾಟ್‌ ಪರಿಶೀಲಿಸಿದರು. 

‘ಘಟನೆ ಬಗ್ಗೆ ಸ್ಥಳೀಯರೊಬ್ಬರು ಠಾಣೆಗೆ ಮಾಹಿತಿ ನೀಡಿದ್ದರು. ಸಾವಿಗೆ ನಿಖರ ಮಾಹಿತಿ ಗೊತ್ತಿಲ್ಲ’ ಎಂದು ಪೊಲೀಸರು ಹೇಳಿದರು.

‘ಭಾವನಾ ಅವರು ಪತಿ ಹಾಗೂ ಮಗನ ಜೊತೆ ವಾಸವಿದ್ದರು. ಕೆಲ ವರ್ಷಗಳಿಂದ ಕುಟುಂಬ ಫ್ಲ್ಯಾಟ್‌ನಲ್ಲಿ ನೆಲೆಸಿತ್ತು. ಇಬ್ಬರ ಸಾವಿಗೆ ಕಾರಣವೇನು ಎಂಬುದು ನಿಖರವಾಗಿ ಗೊತ್ತಾಗಿಲ್ಲ. ಆತ್ಮಹತ್ಯೆಯೂ, ಕೊಲೆಯೋ ಅಥವಾ ಆಕಸ್ಮಿಕವೋ ಎಂಬುದು ತನಿಖೆಯಿಂದಲೇ ತಿಳಿಯಬೇಕಿದೆ’ ಎಂದು ತಿಳಿಸಿದರು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !