‘ವೀಣೆಗೆ ಭವಿಷ್ಯದಲ್ಲೂ ಬದುಕಿದೆ’

7
ಸಂಗೀತ ಉತ್ಸವದಲ್ಲಿ ಸುಮಾ ಸುಧೀಂದ್ರ ಅಭಿಮತ

‘ವೀಣೆಗೆ ಭವಿಷ್ಯದಲ್ಲೂ ಬದುಕಿದೆ’

Published:
Updated:
Deccan Herald

ಬೆಂಗಳೂರು: ‘ಆಧುನಿಕ ಸಂಗೀತ ಸಲಕರಣೆಗಳ ನಡುವೆಯೂ ಅಭಿವೃದ್ಧಿ ಹೊಂದುತ್ತಿರುವ ವೀಣೆಗೆ ಭವಿಷ್ಯದಲ್ಲೂ ಬದುಕಿದೆ’ ಎಂದು ಅಂತರರಾಷ್ಟ್ರೀಯ ವೀಣಾವಾದಕಿ ಸುಮಾ ಸುಧೀಂದ್ರ ಅಭಿಪ್ರಾಯಪಟ್ಟರು.

ನಗರದಲ್ಲಿ ಶುಕ್ರವಾರ ಅಕಾಡೆಮಿ ಆಫ್‌ ಮ್ಯೂಸಿಕ್‌ ಆಯೋಜಿಸಿದ್ದ ಕೆ.ಕೆ.ಮೂರ್ತಿ ಅವರ ಸ್ಮರಣಾರ್ಥ ಸಂಗೀತ ಉತ್ಸವದಲ್ಲಿ ‘ಕರ್ನಾಟಕ ಸಂಗೀತದಲ್ಲಿ ವೀಣೆಯ ಪ್ರದರ್ಶನ: ಭೂತ, ವರ್ತಮಾನ ಮತ್ತುಭವಿಷ್ಯ’ ಕುರಿತು ಅವರು ಉಪನ್ಯಾಸ ನೀಡಿದರು.

‘ತಂತ್ರಜ್ಞಾನಕ್ಕೆ ಪೂರಕವಾಗಿ ವೀಣೆಯ ವಿನ್ಯಾಸ, ನಾದ, ತೂಕಗಳಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಭಾಗಗಳನ್ನು ಕಳಚಿಡುವ, ಬೇಕೆಂದಾಗ ಜೋಡಿಸಿ ಬಳಸುವ (Dismantlable) ವಾದ್ಯಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಈ ಮೊದಲು ಮೈಸೂರು, ತಂಜಾವೂರು, ತಿರುವನಂತಪುರ ಮಾದರಿಯ ಬೆರಳೆಣಿಕೆಯಷ್ಟು ವೀಣೆಗಳು ಮಾತ್ರ ಇದ್ದವು’ ಎಂದು ಅವರು ಹೇಳಿದರು.

ಇತಿಹಾಸದ ಪುಟಗಳ ಬಗ್ಗೆ ನೆನಪಿಸಿದ ಅವರು, ‘13ನೇ ಶತಮಾನದಲ್ಲಿ ಸರಸ್ವತಿ ಮತ್ತು ರುದ್ರ ವೀಣೆ ಬಳಕೆಯಲ್ಲಿತ್ತು. ಬೇಲೂರಿನ ದೇವಾಲಯಗಳಲ್ಲಿ ವೀಣಾಧಾರಿ ಶಿಲ್ಪಗಳನ್ನು ಕಾಣಬಹುದು. ರಾಮಾಯಣ, ಮಹಾಭಾರತದ ಕಾಲದಲ್ಲಿಯೂ ಸಂಗೀತದ ಬಗ್ಗೆ ಉಲ್ಲೇಖಗಳನ್ನು ಕಾಣಬಹುದು. ಆದರೆ, ಇಂದು ಆಂಧ್ರದ ಬಾಬಿಲಿಯಂತಹ ಪ್ರಾಚೀನ ಮಾದರಿಯ ವೀಣೆಗಳನ್ನು ಬಳಸುವವರೂ ಇಲ್ಲ. ತಯಾರಕರ ಸಂಖ್ಯೆಯೂ ಕ್ಷೀಣಿಸಿದೆ’ ಎಂದು ಬೇಸರ ವ್ಯಕ್ತಪಡಿಸಿದರು. 

ಕಾರ್ಯಕ್ರಮದಲ್ಲಿ ವಿವಿಧ ವೀಣಾ ನಾದಗಳ ಪ್ರಾತ್ಯಕ್ಷಿಕೆ, ವಿಡಿಯೋ ಪ್ರದರ್ಶನ ನಡೆಯಿತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !