ಪಂಪ್‌ಹೌಸ್‌ನಲ್ಲೇ ವೃದ್ಧನ ಕೊಲೆ

ಶನಿವಾರ, ಏಪ್ರಿಲ್ 20, 2019
31 °C

ಪಂಪ್‌ಹೌಸ್‌ನಲ್ಲೇ ವೃದ್ಧನ ಕೊಲೆ

Published:
Updated:

ಬೆಂಗಳೂರು: ಪೀಣ್ಯದ ಚನ್ನನಾಯಕನಹಳ್ಳಿಯಲ್ಲಿ ಶುಕ್ರವಾರ ಬೆಳಿಗ್ಗೆ ದುಷ್ಕರ್ಮಿಗಳು ನಾಗಪ್ಪ (86) ಎಂಬುವರನ್ನು ಅವರ ಪಂಪ್‌ಹೌಸ್‌ನಲ್ಲೇ ಕೊಲೆ ಮಾಡಿದ್ದಾರೆ.

ಬೆಳಿಗ್ಗೆ 11 ಗಂಟೆ ಸುಮಾರಿಗೆ ನರಸಿಂಹಯ್ಯ ಎಂಬುವರು ಪಂಪ್‌ಹೌಸ್ ಬಳಿ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಹಂತಕರು ತಲೆಗೆ ಕಬ್ಬಿಣದ ಸಲಾಕೆಯಿಂದ ಹೊಡೆದಿದ್ದಾರೆ. ನಾಗಪ್ಪ ಫೈನಾನ್ಸ್ ವ್ಯವಹಾರ ಕೂಡ ಮಾಡುತ್ತಿದ್ದರು. ಹೀಗಾಗಿ, ಹಣಕಾಸಿನ ವಿಚಾರಕ್ಕೇ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

‘ಎಂದಿನಂತೆ ಬೆಳಿಗ್ಗೆ 7 ಗಂಟೆಗೇ ಹೊಲಕ್ಕೆ ಹೋಗಿದ್ದ ಪತಿ, ತುಂಬ ಹೊತ್ತಾದರೂ ಮನೆಗೆ ಬರಲಿಲ್ಲ. ಹೀಗಾಗಿ, ಅವರನ್ನು ಕರೆದುಕೊಂಡು ಬರುವಂತೆ ಮನೆ ಕೆಲಸದಾತ ನರಸಿಂಹಯ್ಯನನ್ನು ಹೊಲಕ್ಕೆ ಕಳುಹಿಸಿದ್ದೆ. ಆತ ಕರೆ ಮಾಡಿ ಪತಿ ಕೊಲೆಯಾಗಿರುವ ವಿಷಯ ತಿಳಿಸಿದ’ ಎಂದು ಮೃತರ ‍ಪತ್ನಿ ಪುಟ್ಟಮ್ಮ ಹೇಳಿಕೆ ಕೊಟ್ಟಿರುವುದಾಗಿ ಪೀಣ್ಯ ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !