ಕೊಲೆ ಪ್ರಕರಣ :ದಂಪತಿ ಬಂಧನ

7

ಕೊಲೆ ಪ್ರಕರಣ :ದಂಪತಿ ಬಂಧನ

Published:
Updated:
Deccan Herald

ಹೊಸಕೋಟೆ: ಬಂಗಾರು ಪೇಟೆಯ ಅಫ್ರೋಜ್ ಪಾಷಾ (32) ಅವರ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಒಬ್ಬ ಮಹಿಳೆ ಸೇರಿದಂತೆ ಇಬ್ಬರನ್ನು ಗುರುವಾರ ಬಂಧಿಸಿದ್ದಾರೆ.

ಮಾಲೂರು ತಾಲ್ಲೂಕು ಕೃಷ್ಣಾಪುರ ಗ್ರಾಮದ 46 ವರ್ಷದ ಸೈಯದ್ ಏಹಸಾನ್ ಮತ್ತು ಆತನ ಪತ್ನಿ ರಷೀದಾ ಬಂಧಿತರು.

‘ಅಫ್ರೋಜ್ ಪಾಷಾ ಹಾಗೂ ರಷೀದಾ ನಡುವೆ ಇದ್ದ ಅಕ್ರಮ ಸಂಬಂಧವೇ ಕೊಲೆಗೆ ಕಾರಣ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಅವಿವಾಹಿತನಾಗಿದ್ದ ಅಫ್ರೋಜ್ ಪಾಷಾ ಟೆಂಪೋ ಚಾಲಕನಾಗಿದ್ದು, ಬಂಗಾರು ಪೇಟೆಯಲ್ಲಿ ಬಾಡಿಗೆಗೆ ವಾಹನವನ್ನು ಪಡೆದು ಓಡಿಸುತ್ತಿದ್ದ. ಕಳೆದ 8 ವರ್ಷಗಳಿಂದ ಆತ ರಷೀದಾ ಅವರ ಮನೆಗೆ ಹೋಗುತ್ತಿದ್ದ. ಈ ವಿಚಾರ ಆಕೆಯ ಪತಿಗೆ ಗೊತ್ತಾಗಿ, ಇಬ್ಬರ ನಡುವೆ ಜಗಳ ಕೂಡ ಆಗಿತ್ತು. ಅಲ್ಲದೆ ಎಚ್ಚರಿಕೆಯನ್ನೂ ನೀಡಿದ್ದ. ಆದರೂ ಆಕೆ, ಅಫ್ರೋಜ್ ಪಾಷಾನೊಂದಿಗೆ ಕರೆ ಮಾಡಿ ಮಾತನಾಡುತ್ತಿದ್ದಳು. ಇದರಿಂದ ಬೇಸತ್ತ ಪತಿ, ಪಾಷಾ ಕೊಲೆಗೆ ಸಂಚು ರೂಪಿಸಿದ’ ಎಂದು ಪೊಲೀಸರು ವಿವರಿಸಿದರು.

ನವೆಂಬರ್‌ 3 ರಂದು ರಾತ್ರಿ ಆತನನ್ನು ಮನೆಗೆ ಕರೆಸಿಕೊಂಡ ದಂಪತಿಗಳು ಕಬ್ಬಿಣದ ಪಿಕಾಸಿಯಿಂದ ತಲೆಗೆ ಹೊಡೆದು ಕೊಲೆ ಮಾಡಿ, ಟಾಟಾಏಸ್ ವಾಹನದಲ್ಲಿ ಶವವನ್ನು ಹಾಕಿ ವಾಹನವನ್ನು ಹೊಸಕೋಟೆ ಬಳಿ ಬಿಟ್ಟು ಹೋಗಿದ್ದರು. ಶವವನ್ನು ನೋಡಿದ ಸಾರ್ವಜನಿಕರು ನ.4 ರಂದು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಡಿವೈಎಸ್‌ಪಿ ಎನ್.ಕುಮಾರ್ ಮಾರ್ಗದರ್ಶನದಲ್ಲಿ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !