ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಿನಿಯರಿಂಗ್ ಕಚೇರಿ ಎದುರು ಚಾಲಕನ ಹತ್ಯೆ

Last Updated 12 ಮೇ 2019, 19:27 IST
ಅಕ್ಷರ ಗಾತ್ರ

ಬೆಂಗಳೂರು: ನೃಪತುಂಗ ರಸ್ತೆಯಲ್ಲಿರುವ ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಕಚೇರಿ ಎದುರೇ ದುಷ್ಕರ್ಮಿಗಳು ಟ್ರ್ಯಾಕ್ಟರ್ ಚಾಲಕ ಶಿವನಾಯಕ್ (40) ಎಂಬುವರನ್ನು ಶನಿವಾರ ರಾತ್ರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

ಆಂಧ್ರಪ್ರದೇಶದ ಕುಪ್ಪಂನವರಾದ ಅವರು, 25 ವರ್ಷಗಳ ಹಿಂದೆ ನಗರಕ್ಕೆ ಬಂದು ಪತ್ನಿ–ಮಕ್ಕಳ ಜತೆ ಹೊಸ
ಕೆರೆಹಳ್ಳಿ ಸಮೀಪದ ವೀರಭದ್ರನಗರದಲ್ಲಿ ನೆಲೆಸಿದ್ದರು. ರಾತ್ರಿ 12 ಗಂಟೆ ಸುಮಾರಿಗೆ ‘ಏರ್‌ಟೆಲ್ ಕಂಪನಿ’ಯ ಆಪ್ಟಿಕಲ್ ಕೇಬಲ್ ಅಳವಡಿಕೆ ಕೆಲಸಕ್ಕೆಂದು ಬಂದಿದ್ದಾಗ ಅವರ ಕೊಲೆ ನಡೆದಿದೆ.

ಸಹಕಾರ್ಮಿಕರ ಜತೆ ರಾತ್ರಿ ಕೇಬಲ್ ಅಳವಡಿಕೆ ಕೆಲಸದಲ್ಲಿ ನಿರತರಾಗಿದ್ದ ಶಿವನಾಯಕ್, ಸ್ವಲ್ಪ ಸಮಯದ ಬಳಿಕ ಏಕಾಏಕಿ ನಾಪತ್ತೆಯಾಗಿದ್ದರು. ಕಾರ್ಮಿಕರು ಅವರನ್ನು ಹುಡುಕಿಕೊಂಡು ಹೊರಟಾಗ, ಎಂಜಿನಿಯರಿಂಗ್ ಕಚೇರಿ ಎದುರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣ ಆಸ್ಪತ್ರೆಗೆ ಕರೆದೊಯ್ದರಾದರೂ, ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು ಎಂದು ಪೊಲೀಸರು ಹೇಳಿದ್ದಾರೆ.

ಸುಲಿಗೆ ಸಂಶಯವಿತ್ತು: ‘ಯಾರೋ ಸುಲಿಗೆಕೋರರು ಹಣಕ್ಕಾಗಿ ಚಾಕುವಿನಿಂದ ಇರಿದಿರಬಹುದು ಎಂಬ ಸಂಶಯ ಆರಂಭದಲ್ಲಿ ಮೂಡಿತ್ತು. ಆದರೆ, ಮೊಬೈಲ್ ಹಾಗೂ ಹಣ ಮೃತರ ಜೇಬಿನಲ್ಲೇ ‍ಪತ್ತೆಯಾಗಿದೆ. ಸಿ.ಸಿ ಟಿ.ವಿ ಕ್ಯಾಮೆರಾಗಳ ದೃಶ್ಯಾವಳಿ ಪರಿಶೀಲಿಸಲಾಗುತ್ತಿದೆ. ಗುತ್ತಿಗೆದಾರ ವೇಣುಗೋಪಾಲ್ ಹಾಗೂ ಎಲ್ಲ ಕಾರ್ಮಿಕರನ್ನೂ ವಿಚಾರಣೆ ನಡೆಸುತ್ತಿದ್ದೇವೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ವೇಣುಗೋಪಾಲ್ ಹಾಗೂ ಶಿವನಾಯಕ್ ನಡುವೆ ಕೆಲಸದ ಸ್ಥಳದಲ್ಲಿ ಮಾತಿನ ಚಕಮಕಿ ನಡೆದಿತ್ತು. ಅದೇ ಹಿನ್ನೆಲೆಯಲ್ಲಿ ಹತ್ಯೆ ನಡೆದಿದೆ. ಹೀಗಾಗಿ, ವೇಣುಗೋಪಾಲ್ ಅವರನ್ನು ತಕ್ಷಣ ಬಂಧಿಸಬೇಕು’ ಎಂದು ಮೃತರ ಸಂಬಂಧಿಕರು ಠಾಣೆ ಬಳಿ ಜಮಾಯಿಸಿ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT