ನಾಗನಾಥೇಶ್ವರ ಬ್ರಹ್ಮರಥೋತ್ಸವ

ಸೋಮವಾರ, ಮೇ 20, 2019
30 °C

ನಾಗನಾಥೇಶ್ವರ ಬ್ರಹ್ಮರಥೋತ್ಸವ

Published:
Updated:
Prajavani

ಬೊಮ್ಮನಹಳ್ಳಿ: ನಿಂಬಾಪುರಿ ಭಾಸ್ಕರ ಕ್ಷೇತ್ರದ ಪಾರ್ವತಿ–ನಾಗನಾಥೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವವು ಬೇಗೂರಿನಲ್ಲಿ ಸೋಮವಾರ ಅದ್ದೂರಿಯಾಗಿ ನಡೆಯಿತು.

ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳು ರಥಕ್ಕೆ ಬಾಳೆಹಣ್ಣಿನ ಜವನ ಅರ್ಪಿಸಿದರು. ಉತ್ಸವದ ಅಂಗವಾಗಿ ಬೆಳಿಗ್ಗೆ ಸುಪ್ರಭಾತ ಸೇವೆ ಸಲ್ಲಿಸಿ, ಗರ್ಭಗುಡಿಯ ಮೂಲ ವಿಗ್ರಹಕ್ಕೆ ಹಾಲಿನ ಅಭಿಷೇಕ ಮಾಡಲಾಯಿತು. ಸುದರ್ಶನ ಹೋಮ, ಮಹಾಮಂಗಳಾರತಿ ಮಾಡಿದ ಆಗಮಿಕರು ರಾಜಬೀದಿಯಲ್ಲಿ ರಥಬಲಿ ಸಮರ್ಪಿಸಿದರು.

ಶಿವ-ಪಾರ್ವತಿಯರ ವಿವಾಹವೇ ಈ ಹಬ್ಬದ ವಿಶೇಷ. ಉತ್ಸವದ ಹಿಂದಿನ ದಿನವೇ ಅರ್ಚಕರ ತಂಡ ಪೂಜಾ–
ಕೈಂಕರ್ಯಗಳನ್ನು ಆರಂಭಿಸಿ ವಿವಾಹ ನೆರವೇರಿಸಿದರು. ರಥೋತ್ಸವದಲ್ಲಿ ಶಿವ-ಪಾರ್ವತಿಯರ ಮೆರವಣಿಗೆ ಮಾಡಲಾಯಿತು.

‘ತಲಕಾಡಿನ ಗಂಗರು ಮತ್ತು ತಂಜಾವೂರಿನ ಚೋಳರು ಈ ದೇವಸ್ಥಾನ ಕಟ್ಟಿಸಿದ್ದಾರೆ’ ಎಂದು ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ.

ಜಾತ್ರೆಗೆ ಬಂದ ಭಕ್ತರಿಗೆ ಪಾನಕ, ನೀರು, ಮಜ್ಜಿಗೆ, ಕೋಸಂಬರಿಗಳನ್ನು ಬೇಗೂರಿನ ಗ್ರಾಮಸ್ಥರು ನೀಡಿದರು. ಏಳು ಗ್ರಾಮಗಳ ಹೂವುಗಳಿಂದ ಅಲಂಕೃತಗೊಂಡ ಪಲ್ಲಕ್ಕಿಗಳ ಉತ್ಸವ ಸೋಮವಾರ ರಾತ್ರಿ 8ಕ್ಕೆ ಆರಂಭವಾಗಿ ಬೆಳಗಿನ ಜಾವದವರೆಗೂ ನಡೆಯಿತು.

ಆಂಧ್ರಪ್ರದೇಶದ ಚಿತ್ತೂರಿನ ಕನ್ನಯ್ಯ ಅವರು ಜಾತ್ರೆಯಲ್ಲಿ ಗಾಂಧಿವೇಷ ಧರಿಸಿಕೊಂಡು, ಸ್ತಬ್ಧವಾಗಿ ನಿಂತುಕೊಂಡು ಜನರ ಗಮನ ಸೆಳೆದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !