ಸೋಮವಾರ, ಏಪ್ರಿಲ್ 19, 2021
32 °C

'ನ್ಯಾನೊ ಉಪಗ್ರಹದಿಂದ ಉಡಾವಣೆ ವೆಚ್ಚ ಕಡಿಮೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೊಮ್ಮನಹಳ್ಳಿ: ‘ಭವಿಷ್ಯದ ವಿಜ್ಞಾನದಲ್ಲಿ ನ್ಯಾನೊ ತಂತ್ರಜ್ಞಾನ ಅಪರಿಮಿತ ಬದಲಾವಣೆಗಳನ್ನು ಸೃಷ್ಟಿಸಲಿದ್ದು, ಇದರಿಂದ ಉಪಗ್ರಹ ತಯಾರಿಕಾ ಕ್ಷೇತ್ರದ ವೆಚ್ಚವು ಗಣನೀಯವಾಗಿ ಕಡಿಮೆಯಾಗಲಿದೆ’ ಎಂದು ಹಿರಿಯ ಬಾಹ್ಯಾಕಾಶ ವಿಜ್ಞಾನಿ ಡಾ.ಪಿ.ಎಸ್.ಗೋಯಲ್ ಅಭಿಪ್ರಾಯಪಟ್ಟರು.

ಹೊಸೂರು ರಸ್ತೆಯ ಕೂಡ್ಲು ಗೇಟ್‌ನಲ್ಲಿರುವ ದಯಾನಂದ ಸಾಗರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆರಂಭಗೊಂಡ ನ್ಯಾನೊ ಉಪಗ್ರಹ ವಿನ್ಯಾಸ ಹಾಗೂ ಬೆಳವಣಿಗೆ ಕುರಿತ ಮೂರು ದಿನಗಳ ರಾಷ್ಟ್ರ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ನ್ಯಾನೊ ತಂತ್ರಜ್ಞಾನದ ಅಭಿವೃದ್ಧಿಯಿಂದಾಗಿ ಉಪಗ್ರಹದ ದ್ರವ್ಯರಾಶಿ, ಗಾತ್ರ ಹಾಗೂ ಇಂಧನ ಬಳಕೆಯಲ್ಲಿ ಇಳಿಕೆ ಆಗಲಿದೆ. ಜತೆಗೆ, ನಿಖರತೆ ಹಾಗೂ ಅದರ ವೇಗವೂ ಹೆಚ್ಚಲಿದೆ. ಇದು ಭವಿಷ್ಯದಲ್ಲಿ ಸಮಾಜಕ್ಕೆ ಭಾರಿ ಕೊಡುಗೆ ನೀಡಲಿದೆ. ಈ ಕ್ಷೇತ್ರದಲ್ಲಿ ಅಧ್ಯಯನ ಮತ್ತು ಸಂಶೋಧನೆಗೆ ವಿದ್ಯಾರ್ಥಿಗಳು ಆಸಕ್ತಿ ಬೆಳೆಸಿಕೊಳ್ಳುವುದರಿಂದ ವೈಯಕ್ತಿಕವಾಗಿ ಪ್ರಯೋಜನ ಆಗುವ ಜತೆಗೆ ದೇಶಕ್ಕೂ ಒಳಿತಾಗಲಿದೆ’ ಎಂದರು.

ವಿಜ್ಞಾನಿ ರಾಜಂಗಂ ಮಾತನಾಡಿ, ‘ದೇಶ ಸ್ವಾತಂತ್ರ್ಯ ಪಡೆದ ಆರಂಭ ದಿನಗಳಲ್ಲಿ ಒಂದು ಸೂಜಿಯನ್ನೂ ಆಮದು ಮಾಡಿಕೊಳ್ಳುವ ಸ್ಥಿತಿ ಇತ್ತು. ನಮ್ಮಲ್ಲಿ ಯಾವ ತಂತ್ರಜ್ಞಾನವೂ ಇರಲಿಲ್ಲ‘ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು