ಸಂಭ್ರಮದ ನರಸೀಪುರ ಮಾರಮ್ಮ ಜಾತ್ರೆ

ಮಂಗಳವಾರ, ಜೂನ್ 18, 2019
24 °C

ಸಂಭ್ರಮದ ನರಸೀಪುರ ಮಾರಮ್ಮ ಜಾತ್ರೆ

Published:
Updated:
Prajavani

ದಾಬಸ್‌ಪೇಟೆ: ತಳಿರು ತೋರಣ, ಹೂ ಹಾಗೂ ರಂಗೋಲಿಗಳಿಂದ ಅಲಂಕೃತಗೊಂಡ ಮಾರಮ್ಮನ ಗುಡಿ. ಬಣ್ಣಬಣ್ಣದ ಸೀರೆಯುಟ್ಟ ಗೃಹಿಣಿಯರು, ತಂಬಿಟ್ಟಿನ ಘಮ, ತಮಟೆ ವಾದ್ಯಕ್ಕೆ ಯುವಕರು, ಪುಟಾಣಿಗಳ ನರ್ತನ, ಖುಷಿಯ ಹೊನಲು.

ಇವು ನರಸೀಪುರದ ಊರಹಬ್ಬ ಹಾಗೂ ಮಾರಮ್ಮ ಜಾತ್ರೆಯ ಸಂಭ್ರಮವನ್ನು ಹೆಚ್ಚಿಸಿದ್ದವು.

ಮಾರಮ್ಮನಿಗೆ ಪುಣ್ಯಾಹ್ನ ಹಾಗೂ ವಿವಿಧ ಪೂಜಾ ಕಾರ್ಯಗಳು ನಡೆದವು. ಆಂಜನೇಯ ಸ್ವಾಮಿಗೆ ಸಂಜೆ ಬೆಲ್ಲದ ಆರತಿ ಮಾಡಲಾಯಿತು. ದೇವಿಯ ತವರು ನೆಲವಾದ ಸಾಲಹಟ್ಟಿಗೆ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸಲಾಯಿತು. ನಂತರ ದೇವರಹಟ್ಟಿ ಪಾಳ್ಯ, ಬೆಟ್ಟದ ಹೊಸಹಳ್ಳಿ, ನರಸೀಪುರ ತೋಪಿನ ಮನೆಗಳಿಗೆ ತೆಗೆದುಕೊಂಡು ಹೋಗಿ ಪೂಜೆ ಮಾಡಿಸಲಾಯಿತು. 

ಹೆಂಗಳೆಯರು ಹೊಂಬಾಳೆ, ಕನಕಾಂಬರ, ಮಲ್ಲಿಗೆ, ಗುಲಾಬಿ ಹೂಗಳಿಂದ ಸಿಂಗಾರ ಮಾಡಿದ ಆರತಿ ತಂಬಿಟ್ಟು ಹೊತ್ತು ಸಾಗಿದರು. ಹರಕೆ ಹೊತ್ತವರು ದೇವಾಲಯ ಮುಂಭಾಗದ ಕೊಂಡದಲ್ಲಿ ದಾಟಿ ದೇವಿಗೆ ಆರತಿ ಬೆಳಗಿದರು. ಮೆರವಣಿಗೆ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

'ದೇವಿಯು ಸಾಂಕ್ರಾಮಿಕ ರೋಗಗಳಿಂದ ಕಾಪಾಡುವುದರೊಂದಿಗೆ, ಉತ್ತಮ ಮಳೆ–ಬೆಳೆಗೆ ಸಹಕರಿಸುತ್ತಾಳೆ ಎಂಬ ನಂಬಿಕೆಯಲ್ಲಿ ಗ್ರಾಮಸ್ಥರೆಲ್ಲಾ ಸೇರಿ ಜಾತ್ರೆ ಮಾಡುತ್ತೇವೆ' ಎಂದು ತಿಳಿಸಿದರು ಸ್ಥಳೀಯರಾದ ಪ್ರವೀಣ್.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !