ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾರಾಯಣ ಹೆಲ್ತ್‌ನಿಂದ ಉಚಿತ ಆರೋಗ್ಯ ತಪಾಸಣೆ

Last Updated 15 ಮಾರ್ಚ್ 2019, 15:16 IST
ಅಕ್ಷರ ಗಾತ್ರ

‘ನಾರಾಯಣ ಹೆಲ್ತ್’ ನಗರದ ವಿವಿಧೆಡೆ ಎಲುಬು ಮತ್ತು ಕೀಲು, ಮಕ್ಕಳ ರೋಗ ಮತ್ತು ಇಎನ್‍ಟಿ ಕುರಿತು ಉಚಿತ ತಪಾಸಣೆ ಆಯೋಜಿಸಿದೆ.

ಆರೋಗ್ಯ ತಪಾಸಣೆ ಮತ್ತು ಆರೋಗ್ಯಕರ ಜೀವನ ಶೈಲಿಯ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಈ ಶಿಬಿರದ ಉದ್ದೇಶ. ತಪಾಸಣೆಯ ವೇಳೆ ವೈದ್ಯರು ಆರೋಗ್ಯ ಕಾಳಜಿ ಕುರಿತು ಸರಳ, ಸುಲಭ ಸಲಹೆಗಳನ್ನು ನೀಡುವರು ಹಾಗೂ ಆರೋಗ್ಯಕರ ಜೀವನಶೈಲಿಯಲ್ಲಿ ಅನುಸರಿಬೇಕಾದ ಮತ್ತು ಅನುಸರಿಬಾರದ ವಿಧಾನಗಳ ಬಗ್ಗೆ ಅರಿವು ಮೂಡಿಸುವರು.

ಉಚಿತ ಮೂಳೆ ಮತ್ತು ಕೀಲು ತಪಾಸಣಾ ಶಿಬಿರದಲ್ಲಿ ಪ್ರಮುಖವಾಗಿ ಬುಜ, ಮೊಣಕಾಲು, ಕೀಲು ಮತ್ತು ಬೆನ್ನು ನೋವು ಸಮಸ್ಯೆಗಳಿಗೆ ಮೂಲಭೂತ ತಪಾಸಣೆ ಮತ್ತು ತಜ್ಞ ವೈದ್ಯರ ಸಲಹೆ ಒಳಗೊಂಡಿರುತ್ತದೆ.

ಇಎನ್‍ಟಿ ತಪಾಸಣೆಯಲ್ಲಿ ಪ್ರಮುಖವಾಗಿ, ರಕ್ತದ ಒತ್ತಡ, ಎತ್ತರ, ತೂಕ, ದೇಹ ತೂಕ ಅನುಪಾತ, ಗ್ಲೂಕೋಸ್ ರ‍್ಯಾಂಡಮ್‌ ಬ್ಲಡ್ ಶುಗರ್ ಟೆಸ್ಟ್, ಕಿವಿ, ಮೂಗು ಮತ್ತು ಗಂಟಲಿನ ಎಂಡೋಸ್ಕೋಪಿಕ್ ತಪಾಸಣೆ ಒಳಗೊಂಡಿರುತ್ತದೆ.

ಮಕ್ಕಳ ಆರೋಗ್ಯ ತಪಾಸಣೆಯಲ್ಲಿ ಅತಿಸಾರ, ನ್ಯುಮೋನಿಯಾ, ಮಲೇರಿಯಾ, ಸಿಡುಬು, ದನುರ್ವಾಯು ಮತ್ತು ಅಪೌಷ್ಟಿಕತೆ ಸ್ಥಿತಿಗತಿ ಬಗ್ಗೆ ತಜ್ಞ ವೈದ್ಯರ ಸಲಹೆ ಹಾಗೂ ಮೂಲಭೂತ ತಪಾಸಣೆಗಳು ಮತ್ತಿತರ ಅಂಶಗಳು ಒಳಗೊಳ್ಳುತ್ತವೆ.

ಮಧುಮೇಹ ಪರೀಕ್ಷೆಯಲ್ಲಿ ಡಯಾಬಿಟಿಕ್ ರೆಟಿನೋಪತಿ, ಡಯಾಬಿಟಿಕ್ ಮೂತ್ರಶಾಸ್ತ್ರ, ರಕ್ತದ ಸಕ್ಕರೆ ಅಂಶದ ನಿಯಂತ್ರಣ ಮತ್ತಿತರ ವಿಷಯಗಳ ಬಗ್ಗೆ ತಜ್ಞ ವೈದ್ಯರ ಸಲಹೆ ಮತ್ತು ಮೂಲಭೂತ ತಪಾಸಣೆಗಳು ಇರುತ್ತವೆ.

ನೋಂದಣಿ ಮತ್ತು ಮುಂಚಿತವಾಗಿ ವೈದ್ಯರ ಭೇಟಿ ಸಮಯ ನಿಗದಿಪಡಿಸಿಕೊಳ್ಳುವುದು ಕಡ್ಡಾಯ. ಧೀರ್ಘಕಾಲಿಕ ಸ್ಥಿತಿಯ ಪ್ರಕರಣಗಳಲ್ಲಿ, ರೋಗಿಗಳು ಈ ಹಿಂದಿನ ವೈದ್ಯಕೀಯ ದಾಖಲೆಗಳು ಇದ್ದಲ್ಲಿ ತರಬೇಕಾಗುತ್ತದೆ.

ಎಲ್ಲೆಲ್ಲಿ ಯಾವ ತಪಾಸಣೆ?

lಎಲುಬು ಮತ್ತು ಕೀಲು (ಮಾರ್ಚ್‌ 16), ಇಎನ್‌ಟಿ (ಮಾರ್ಚ್‌ 19), ಮಧುಮೇಹ ತಪಾಸಣೆಯು (ಮಾರ್ಚ್‌ 22) ಲಾಂಗ್‌ ಫೋರ್ಡ್‌ ಟೌನ್‌ನಲ್ಲಿರುವ ನಾರಾಯಣ ಮೆಡಿಕಲ್‌ ಸೆಂಟರ್‌ನಲ್ಲಿ ನಡೆಯಲಿದೆ. ನೋಂದಣಿಗೆ 88844 31453

l ಇಎನ್‌ಟಿ ತಪಾಸಣೆ (ಮಾರ್ಚ್‌ 18) ಜಯನಗರ 4ನೇ ಬ್ಲಾಕ್‌ನಲ್ಲಿರುವ ನಾರಾಯಣ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್‌ನಲ್ಲಿ ನಡೆಯಲಿದೆ. ನೋಂದಣಿಗೆ 88840 00991/ 95139 19615

lಮಕ್ಕಳ ತಪಾಸಣೆ (ಮಾರ್ಚ್‌ 20) ಎಲೆಕ್ಟ್ರಾನಿಕ್‌ ಸಿಟಿಯ ನೀಲಾದ್ರಿ ರಸ್ತೆಯ ಫೇಸ್‌–1ರಲ್ಲಿರುವ ನಾರಾಯಣ ಮಲ್ಟಿಸ್ಪೆಷಾಲಿಟಿ ಕ್ಲಿನಕ್‌ನಲ್ಲಿ ಆಯೋಜಿಸಲಾಗಿದೆ. ನೋಂದಣಿಗೆ 9611 435353

lಸ್ತ್ರೀರೋಗ ತಪಾಸಣೆ (ಮಾರ್ಚ್‌ 24) ಸರ್ಜಾಪುರ ರಸ್ತೆಯ ನಾರಾಯಣ ಮಲ್ಟಿಸ್ಪೆಷಾಲಿಟಿ ಕ್ಲಿನಕ್‌ನಲ್ಲಿ ನಡೆಯಲಿದೆ. ನೋಂದಣಿಗೆ 88844 31319/8884 431318

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT