ವುಮೆನ್ಸ್‌ ಪಾರ್ಟಿ ರಾಜ್ಯ ಘಟಕಕ್ಕೆ ಚಾಲನೆ

7

ವುಮೆನ್ಸ್‌ ಪಾರ್ಟಿ ರಾಜ್ಯ ಘಟಕಕ್ಕೆ ಚಾಲನೆ

Published:
Updated:

ಬೆಂಗಳೂರು: ನ್ಯಾಷನಲ್‌  ವುಮೆನ್ಸ್‌ ಪಾರ್ಟಿಯ ರಾಜ್ಯ ಘಟಕವನ್ನು ಗುರುವಾರ ನಗರದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಶ್ವೇತಾ ಶೆಟ್ಟಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ‘ರಾಜಕೀಯ ಪಕ್ಷಗಳು ಮಹಿಳೆಯರ ಹಕ್ಕುಗಳು ಮತ್ತು ಸಮಾನತೆಯ ವಿಚಾರಗಳನ್ನು ನಿರ್ಲಕ್ಷಿಸಿವೆ. ಆದ್ದರಿಂದ ಮಹಿಳಾ ಮೀಸಲಾತಿ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲು ಪಕ್ಷವನ್ನು ಸ್ಥಾಪಿಸಲಾಗಿದೆ’ ಎಂದು ಹೇಳಿದರು.

‘ಪಕ್ಷ ಸಂಘಟನೆ ಉದ್ದೇಶದಿಂದ ರಾಜ್ಯದಲ್ಲಿ ರೂಪರಾಣಿ ಅಧ್ಯಕ್ಷತೆಯಲ್ಲಿ ಹಂಗಾಮಿ ಸಮಿತಿ ರಚಿಸಲಾಗಿದೆ. ಪಕ್ಷದ ಪದಾಧಿಕಾರಿಗಳ ಆಯ್ಕೆಯ ಬಳಿಕ ಶಾಶ್ವತ ಸಮಿತಿಯನ್ನು ರಚಿಸಲಾಗುತ್ತದೆ’ ಎಂದು ತಿಳಿಸಿದರು.

ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಲು ಹೋರಾಟ ಮಾಡಲಾಗುವುದು ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !