ನೆಲಮಂಗಲ: ಪೂಜೆಗೆ ಸೀಮಿತವಾದ ಕಾಮಗಾರಿ

7

ನೆಲಮಂಗಲ: ಪೂಜೆಗೆ ಸೀಮಿತವಾದ ಕಾಮಗಾರಿ

Published:
Updated:
Prajavani

ನೆಲಮಂಗಲ: ಪಟ್ಟಣದ ವಾಜರಹಳ್ಳಿ ರಸ್ತೆಯ ಶೇಷು ಬಡಾವಣೆಯ ರಸ್ತೆ ದುರಸ್ತಿಗೆ ಗುದ್ದಲಿ ಪೂಜೆ ನಡೆದರೂ ಕಾಮಗಾರಿ ನಡೆದಿಲ್ಲ. 

ಡಿ. 4ರಂದು ಪೂಜೆಯ ದಿನ ರಸ್ತೆಯನ್ನು ಜೆಸಿಬಿ ಮೂಲಕ ಅಗೆದುಹಾಕಲಾಯಿತು. ಈಗ ಜನರಿಗೆ ಹೊಸರಸ್ತೆಯೂ ಇಲ್ಲ. ಮಣ್ಣಿನ ರಸ್ತೆಯೂ ಇಲ್ಲವಾಗಿದೆ.

ದಪ್ಪ ಕಲ್ಲು, ಮಣ್ಣಿನ ಹೆಂಟೆಗಳು ರಸ್ತೆಯೆಲ್ಲ ಹರಡಿಕೊಂಡು ನಡೆದಾಡುವುದೂ ಕಷ್ಟವಾಗಿದೆ. ದ್ವಿಚಕ್ರ ವಾಹನ ಸವಾರರೂ
ಕಷ್ಟಪಡುತ್ತಿದ್ದಾರೆ.

‘ಬಡಾವಣೆಯ ಕೊನೆಗೆ ಹೋದರೆ ರಸ್ತೆಯನ್ನೆಲ್ಲ ಗಿಡ ಗಂಟೆಗಳು ಆವರಿಸಿಕೊಂಡು, ಕಾಲುದಾರಿ ಮಾತ್ರ ಕಾಣುತ್ತದೆ. ಇದೊಂದು ಮೂಗಿಗೆ ತುಪ್ಪ ಸವರುವ ಕೆಲಸದಂತಾಗಿದೆ’ ಎನ್ನುತ್ತಾರೆ ಶ್ಯಾಮರಾವ್.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !