ಸ್ಥೂಲಕಾಯ ನಿವಾರಣೆಗೆ ಹೊಸ ಚಿಕಿತ್ಸೆ

ಸೋಮವಾರ, ಏಪ್ರಿಲ್ 22, 2019
29 °C
ಮಣಿಪಾಲ್ ಆಸ್ಪತ್ರೆಯಲ್ಲಿ ‘ಸ್ಥೂಲಕಾಯ ಮತ್ತು ಮೆಟಾಬಾಲಿಕ್ ಕ್ಲಿನಿಕ್’ ಲೋಕಾರ್ಪಣೆ

ಸ್ಥೂಲಕಾಯ ನಿವಾರಣೆಗೆ ಹೊಸ ಚಿಕಿತ್ಸೆ

Published:
Updated:
Prajavani

ಬೆಂಗಳೂರು: ಹೆಚ್ಚುತ್ತಿರುವ ಸ್ಥೂಲಕಾಯದ ಸಮಸ್ಯೆಗಳಿಗೆ ಚಿಕಿತ್ಸೆ ಒದಗಿಸಲು ಮಣಿಪಾಲ್ ಆಸ್ಪತ್ರೆಯು ‘ಸ್ಥೂಲಕಾಯ ಮತ್ತು ಮೆಟಾಬಾಲಿಕ್ ಕ್ಲಿನಿಕ್’ ಆರಂಭಿಸಿದೆ.

ಆಸ್ಪತ್ರೆಯ ಗ್ಯಾಸ್ಟ್ರೊಎಂಟಿರಾಲಜಿ ವಿಭಾಗದ ಡಾ.ಮೊಹಿತ್‌ ಶೆಟ್ಟಿ, ‘ಎಂಡೊಸ್ಕೊಪಿಕ್ ಬ್ಯಾರಿಯಾಟ್ರಿಕ್ ಥೆರಪಿ (ಇಬಿಟಿ) ಸ್ಥೂಲಕಾಯ ನಿರ್ವಹಣೆಗಾಗಿ ಇರುವ ಹೊಸ, ಸುರಕ್ಷಿತ ಮತ್ತು ಪರಿಣಾಮಕಾರಿ ಚಿಕಿತ್ಸಾ ವಿಧಾನ. ಇದರಿಂದ ಶಸ್ತ್ರಚಿಕಿತ್ಸೆಯಿಲ್ಲದೇ ದೇಹ ತೂಕವನ್ನು ಸುಲಭವಾಗಿ ಕಡಿಮೆಗೊಳಿಸಬಹುದು’ ಎಂದರು.

ದೇಹದ ತೂಕ ಹೆಚ್ಚಾದರೆ ಸ್ಥೂಲಕಾಯ ಸಮಸ್ಯೆ ಎದುರಾಗುತ್ತದೆ. ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯದ ರಕ್ತನಾಳಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೂ ಇದು ಕಾರಣವಾಗುತ್ತದೆ ಎಂದರು.

ಎಂಡೊಸ್ಕೊಪಿಕ್ ಸ್ಲೀವ್ ಗ್ಯಾಸ್ಟ್ರೊಪ್ಲಾಸ್ಟಿ (ಇಎಸ್‌ಜಿ) ಸ್ಥೂಲಕಾಯ ನಿವಾರಣೆಗಾಗಿ ಹೊಸ, ಸುರಕ್ಷಿತ ಮತ್ತು ಪರಿಣಾಮಕಾರಿ ಚಿಕಿತ್ಸೆಯ ಆಯ್ಕೆ ಕುರಿತು ಆಸ್ಪತ್ರೆಯಲ್ಲಿ ಕಾರ್ಯಗಾರ ಆಯೋಜಿಸಲಾಗಿತ್ತು.

Tags: 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !