ಸುಂಟಿಕೊಪ್ಪದಲ್ಲಿ ಮೊದಲ ಮಳೆ

ಶನಿವಾರ, ಏಪ್ರಿಲ್ 20, 2019
29 °C

ಸುಂಟಿಕೊಪ್ಪದಲ್ಲಿ ಮೊದಲ ಮಳೆ

Published:
Updated:

ಸುಂಟಿಕೊಪ್ಪ: ಸುಂಟಿಕೊಪ್ಪ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಮೊದಲ ಮಳೆ ಸುರಿದು ರೈತರಲ್ಲಿದ್ದ  ಆತಂಕ ದೂರ ಮಾಡಿತು. ಕಳೆದ ಹಲವು ದಿನಗಳಿಂದ ಬಿರುಬಿಸಿಲು ಮತ್ತು ಸೆಕೆಯಿಂದ ತತ್ತರಿಸಿ ಹೋಗಿದ್ದ ಜನ‌ರು ಮಂಗಳವಾರ ಸುರಿದ ಮಳೆಗೆ ನಿಟ್ಟುಸಿರು ಬಿಟ್ಟರು.

ಮಂಗಳವಾರ ಬೆಳಿಗ್ಗೆಯಿಂದ ಉರಿ ಬಿಸಿಲಿನಿಂದ ಕೂಡಿದ್ದ ಪಟ್ಟಣದಲ್ಲಿ ಸಂಜೆ ವೇಳೆ ಗುಡುಗು–ಸಿಡಿಲಿನಿಂದ ಕೂಡಿದ ಮಳೆ ಸುರಿಯಿತು. ಹರದೂರು, ನಾಕೂರು ಶಿರಂಗಾಲ, ಮಾದಾಪುರ, ಕೆದಕಲ್, ಕೊಡಗರಹಳ್ಳಿ, ಏಳನೇ ಹೊಸಕೋಟೆ, ಕಂಬಿಬಾಣೆಯಲ್ಲೂ ಉತ್ತಮ ಮಳೆ ಸುರಿಯಿತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !